Wednesday, June 3, 2026
Homeಕರಾವಳಿಆಟಿ ಅಮಾವಾಸ್ಯೆ ಪ್ರಯುಕ್ತ ಸವಣಾಲು ಅತಿಶಯ ಜೈನ ತೀರ್ಥ ಕ್ಷೇತ್ರಕ್ಕೆ ರಕ್ಷಿತ್ ಶಿವರಾಂ ಭೇಟಿ

ಆಟಿ ಅಮಾವಾಸ್ಯೆ ಪ್ರಯುಕ್ತ ಸವಣಾಲು ಅತಿಶಯ ಜೈನ ತೀರ್ಥ ಕ್ಷೇತ್ರಕ್ಕೆ ರಕ್ಷಿತ್ ಶಿವರಾಂ ಭೇಟಿ

- Advertisement -
- Advertisement -

ಬೆಳ್ತಂಗಡಿ; ಆಟಿ ಅಮಾವಾಸ್ಯೆ ಪುಣ್ಯ ದಿನದಂದು ಇಂದು ತಾಲೂಕಿನ ಪುಣ್ಯ ಕ್ಷೇತ್ರ  ಸವಣಾಲು  ಅತಿಶಯ ಜೈನ ತೀರ್ಥ ಕ್ಷೇತ್ರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ  ಶ್ರೀದೇವರಿಗೆ ಪ್ರಾರ್ಥನೆ ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ  ಸವಣಾಲು ಆದಿನಾಥ ಜಿನ ಮಂದಿರದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಒಂಬತ್ತು ಲಕ್ಷ ಅನುದಾನ ಮಂಜೂರಾತಿಗೆ ಸಹಕರಿಸಿದ ರಕ್ಷಿತ್ ಶಿವರಾಂ ರವರನ್ನು ಸಮಿತಿಯವರು ಗೌರವಿಸಿದರು.ಈ ವೇಳೆ ತಾಲೂಕು ಸರಕಾರಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರಾದ  ಜಯಕೀರ್ತಿ ಜೈನ್  ಸಮಿತಿಯ ಮುಖ್ಯಸ್ಥರಾದ  ಕಿಶೋರ್ ಹೆಗ್ಡೆ ಸುರೇಶ್,ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

- Advertisement -

Latest News

error: Content is protected !!