Thursday, June 25, 2026
Homeಕರಾವಳಿಬಂಟ್ವಾಳ: ಆಕಸ್ಮಿಕವಾಗಿ ಮೃತಪಟ್ಟ ನಾಲ್ಕು ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ನೀಡಿದ...

ಬಂಟ್ವಾಳ: ಆಕಸ್ಮಿಕವಾಗಿ ಮೃತಪಟ್ಟ ನಾಲ್ಕು ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ನೀಡಿದ ಶಾಸಕ ರಾಜೇಶ್ ನಾಯ್ಕ್

- Advertisement -
- Advertisement -

ಬಂಟ್ವಾಳ: ಆಕಸ್ಮಿಕವಾಗಿ ಮೃತಪಟ್ಟ ನಾಲ್ಕು ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಚೇರಿ ಉದ್ಘಾಟನಾ ಸಮಾರಂಭದ ವೇಳೆ  ತಲಾ ಎರಡು ಲಕ್ಷ ರೂ ದೇಣಿಗೆಯನ್ನು ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇದೇ ವೇಳೆ ಮಾತನಾಡಿದ ಅವರು ಬಿಜೆಪಿಯ ಕುಟುಂಬದ ಸದಸ್ಯರಾಗಿದ್ದುಕೊಂಡು, ಆಕಸ್ಮಿಕವಾಗಿ ಜೀವಕಳೆದದ್ದು ನಮಗೆ ಆಘಾತವನ್ನುಂಟು ಮಾಡಿತ್ತು, ಹಾಗಾಗಿ ಇವರ ಕುಟುಂಬಕ್ಕೆ ಪಕ್ಷದ ವತಿಯಿಂದ ಸಹಾಯವಾಗುವ ನಿಟ್ಟಿನಲ್ಲಿ ಕಚೇರಿಯ ಉದ್ಘಾಟನಾ ದಿನದಂದು ಸೇವಾ ಉತ್ಸವ ಎಂಬ ವಿನೂತನ ಕಾರ್ಯಕ್ರಮದ ಮೂಲಕ ನಾಲ್ಕು ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ ದೇಣಿಗೆ ನೀಡಲಾಗಿದೆ.2023 ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಈ ವಿಜಯೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಿ ಸೇವಾ ಉತ್ಸವ ಎಂಬ ಕಾರ್ಯಕ್ರಮದ ಮೂಲಕ ಕಾರ್ಯಕರ್ತರ ಕುಟುಂಬಕ್ಕೆ ನೆರವಾಗುವ ಕಾರ್ಯಕ್ರಮ ಮಾಡಿದ್ದೇವೆ ಎಂದರು.

ಇತ್ತೀಚೆಗೆ ನಿಧನರಾದ ಬಿಜೆಪಿ ಕಾರ್ಯಕರ್ತರಾದ ಜನಾರ್ಧನ ಬಾರಿಂಜೆ, ಪ್ರವೀಣ್ ನಾಯಕ್, ನಿತಿನ್ ಯಾನೆ ರೂಪೇಶ್ ಪೂಜಾರಿ, ವಿಜಿತ್ ಗುರುವಾಯನಕೆರೆ ಅವರ ಕುಟುಂಬಕ್ಕೆ ನೆರವು ನೀಡಿದರು.

- Advertisement -

Latest News

error: Content is protected !!