Monday, June 8, 2026
Homeತಾಜಾ ಸುದ್ದಿಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜುಲೈ 23 ರವರೆಗೆ ಪೊಲೀಸ್ ವಶಕ್ಕೆ!!

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜುಲೈ 23 ರವರೆಗೆ ಪೊಲೀಸ್ ವಶಕ್ಕೆ!!

- Advertisement -
- Advertisement -

ಮುಂಬೈ:ಅಶ್ಲೀಲ ಚಲನಚಿತ್ರ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾರವರನ್ನು ಜ.23ರವರೆಗೂ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

ಕುಂದ್ರಾ, ಅಶ್ಲೀಲ ವಿಡಿಯೋ ಮೂಲಕ ಹಣ ಸಂಪಾದನೆ ಮಾಡುತ್ತಿದ್ದ ಬಗ್ಗೆ ಖಚಿತ ಸಾಕ್ಷ್ಯವಿದೆ. ಅವರನ್ನು ಇನ್ನಷ್ಟುವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ ಅವರನ್ನು ಗರಿಷ್ಠ ಅವಧಿಗೆ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು.

ಅಲ್ಲದೆ ಹಲವು ಆಯಪ್‌ಗಳ ಮೂಲಕ ಕುಂದ್ರಾ ಇಂಥ ದಂಧೆ ನಡೆಸುತ್ತಿದ್ದ ಬಗೆಗಿನ ಹಲವು ವಾಟ್ಸಾಪ್‌ ಸಂದೇಶಗಳು ಲಭ್ಯವಾಗಿದೆ. ಕುಂದ್ರಾ ಬಂಧನದ ಬೆನ್ನಲ್ಲೇ ಆತನಿಂದ ವಂಚನೆಗೆ ಒಳಗಾದ ಮೂರು ಮಹಿಳೆಯರು ದೂರು ನೀಡಲು ಮುಂದೆ ಬಂದಿದ್ದಾರೆ. ಮಾಡೆಲಿಂಗ್‌ ಮತ್ತು ನಟನೆಗೆ ಅವಕಾಶ ಹುಡುಕಿ ಮುಂಬೈಗೆ ಬರುವ ಮಾಡೆಲ್‌, ಕಲಾವಿದರನ್ನು, ಕೆಲಸಗಾರರನ್ನು ತನ್ನ ಬಲೆಗೆ ಬೀಳಿಸಿ ಬಳಿಕ ನೀಲಿ ಚಿತ್ರಗಳಲ್ಲಿ ಅಭಿನಯಿಸುವಂತೆ ಮಾಡುತ್ತಿದ್ದ.

ಇದನ್ನು ಬೇರೆ ಬೇರೆ ಆಯಪ್‌ಗಳಿಗೆ ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸುತ್ತಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.ಪ್ರಕರಣ ಸಂಬಂಧ ಕುಂದ್ರಾನ ಆಪ್ತ ಉಮೇಶ್‌ ಕಾಮತ್‌ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ

- Advertisement -

Latest News

error: Content is protected !!