Friday, June 26, 2026
Homeಕರಾವಳಿರಾಜ್‍ ಬಿ. ಶೆಟ್ಟಿ ನಟಿಸಿರುವ ‘45’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ

ರಾಜ್‍ ಬಿ. ಶೆಟ್ಟಿ ನಟಿಸಿರುವ ‘45’ ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ

- Advertisement -
- Advertisement -

ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್‍ ಬಿ. ಶೆಟ್ಟಿ ಜೊತೆಯಾಗಿ ನಟಿಸುತ್ತಿರುವ ‘45’ ಚಿತ್ರ ಡಿ. 25ರಂದು ಬಿಡುಗಡೆಯಾಗುತ್ತಿದೆ.

ಕೆನಡಾದ ಪ್ರತಿಷ್ಠಿತ MARZ ಸಂಸ್ಥೆ ಈ ಚಿತ್ರಕ್ಕೆ VFX ಕೆಲಸ ಮಾಡುತ್ತಿದ್ದು, ಈ ಸಂಸ್ಥೆ VFX ಮಾಡುತ್ತಿರುವ ಮೊದಲ ಕನ್ನಡ ಚಿತ್ರವಿದು. ಈ ಚಿತ್ರಕ್ಕೆ ಹಾಲಿವುಡ್‍ನ ಖ್ಯಾತ ತಂತ್ರಜ್ಞರಿಂದ ಗ್ರಾಫಿಕ್ಸ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಶೇ. 40ರಷ್ಟು ಗ್ರಾಫಿಕ್ಸ್ ಕೆಲಸವಿದೆ.

ಅಕ್ಟೋಬರ್‍ ತಿಂಗಳಲ್ಲಿ ಚಿತ್ರ ಕೈಗೆ ಸಿಕ್ಕ ನಂತರ ಪ್ರಚಾರ ಮಾಡಿ, ಡಿ. 25ರಂದು ಬಿಡುಗಡೆ ಮಾಡುವುದಾಗಿ ನಿರ್ಮಾಪಕ ರಮೇಶ್‍ ರೆಡ್ಡಿ ಮತ್ತು ನಿರ್ದೇಶಕ ಅರ್ಜುನ್‍ ಜನ್ಯ ತಿಳಿಸಿದ್ದಾರೆ.

- Advertisement -

Latest News

error: Content is protected !!