Friday, April 26, 2024
Homeಕರಾವಳಿದಕ್ಷಿಣಕನ್ನಡದಲ್ಲಿ ವರುಣನ ಆರ್ಭಟ ; ಬೆಳ್ತಂಗಡಿಯಲ್ಲಿ ತಡೆಗೋಡೆ ಒಡೆದು ಭಾರೀ ಹಾನಿ

ದಕ್ಷಿಣಕನ್ನಡದಲ್ಲಿ ವರುಣನ ಆರ್ಭಟ ; ಬೆಳ್ತಂಗಡಿಯಲ್ಲಿ ತಡೆಗೋಡೆ ಒಡೆದು ಭಾರೀ ಹಾನಿ

spot_img
- Advertisement -
- Advertisement -

ಮಂಗಳೂರು;  ಜಿಲ್ಲೆಯಲ್ಲಿ  ನಿನ್ನೆ ಸುರಿದ ಮಳೆಯ ಆರ್ಭಟಕ್ಕೆ ಭಾರೀ ಹಾನಿಯುಂಟಾಗಿದೆ. ಜಿಲ್ಲೆಯ ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ ತಾಲೂಕು ಸೇರಿದಂತೆ ವಿವಿಧೆಡೆ ಭಾರೀ ಮಳೆಯಾಗಿದೆ.

ಇನ್ನು ಬೆಳ್ತಂಗಡಿ ತಾಲೂಕಿನಲ್ಲಿ ಮತ್ತೆ ಅಪಾರ ಹಾನಿಯಾಗಿದೆ. ನಿರಂತರವಾಗಿ ಮೂರು ಗಂಟೆಗಳ ಕಾಲ ಸುರಿದ ಮಳೆಗೆ ಹಳ್ಳ-ಕೊಳ್ಳಗಳೆಲ್ಲಾ ತುಂಬಿದ್ದು, ತಗ್ಗು ಪ್ರದೇಶಗಳೆಲ್ಲಾ ಜಲಾವೃತವಾಗಿತ್ತು. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಸಂಬೋಳ್ಯ ಎಂಬಲ್ಲಿ ತೋಡಿನ ತಡೆಗೋಡೆ ಒಡೆದು ಮಳೆ ನೀರು ಕೃಷಿ ಭೂಮಿಗೆ ನುಗ್ಗಿ ಅಪಾರ ಹಾನಿಯಾಗಿದೆ.

ರಭಸವಾಗಿ ಸುರಿದ ಮಳೆಗೆ ನೀರು ತುಂಬಿ ತಡೆಗೋಡೆ ಒಡೆದಿದ್ದು, ಅಡಿಕೆ ತೋಟ, ಗದ್ದೆಗಳೆಲ್ಲಾ ಕೆಸರು-ಕಲ್ಲುಗಳಿಂದ ತುಂಬಿ ಹೋಗಿದೆ. ಸಂಬೋಳ್ಯ ನಿವಾಸಿಗಳಾದ ಶಶಿಕಾಂತ್,ದಿನೇಶ್,ಉಮೇಶ್ ಎಂಬುವವರ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ.

ಇನ್ನುಳಿದಂತೆ ಗಾಳಿ, ಮಳೆಗೆ ಕೇವಲ ಬೆಳ್ತಂಗಡಿ ತಾಲೂಕಿನಲ್ಲಿಯೇ 500 ಕ್ಕೂ ಹೆಚ್ಚು ಅಡಿಕೆ ಮರಗಳು ಧರಾಶಾಹಿಯಾಗಿದೆ. ಕೆಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ಧರ್ಮಸ್ಥಳ, ಮುಂಡಾಜೆ, ಚಾರ್ಮಾಡಿ, ಮಲವಂತಿಗೆ, ಗುರುವಾಯನಕೆರೆ, ಪಡಂಗಡಿ ಸೇರಿದಂತೆ ಹಲವು ಕಡೆಗಳಲ್ಲಿ ಭಾರೀ ಮಳೆ ಸುರಿದಿದೆ.

ಸುಳ್ಯ, ಬಂಟ್ವಾಳ ತಾಲೂಕಿನ ಹಲವಡೆಯೂ ಭಾರೀ ಮಳೆಗೆ ಕೃಷಿ ಭೂಮಿಗೆ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಬತ್ತಿ ಹೋಗಿದ್ದ ಹಳ್ಳ, ನದಿಗಳಲ್ಲಿ ಜೀವಕಳೆ ಬಂದಂತಾಗಿದೆ.

- Advertisement -
spot_img

Latest News

error: Content is protected !!