Thursday, June 4, 2026
Homeಮನರಂಜನೆತನ್ನ ಸಾವಿನ ಬಗ್ಗೆ ಬಲ್ಲಾಳ ದೇವ ಮಾತನಾಡಿದ್ದ್ಯಾಕೆ? ರಾಣಾ ದಗ್ಗುಬಾಟಿಗೆ ಅಂತಹದ್ದೇನಾಗಿದೆ?

ತನ್ನ ಸಾವಿನ ಬಗ್ಗೆ ಬಲ್ಲಾಳ ದೇವ ಮಾತನಾಡಿದ್ದ್ಯಾಕೆ? ರಾಣಾ ದಗ್ಗುಬಾಟಿಗೆ ಅಂತಹದ್ದೇನಾಗಿದೆ?

- Advertisement -
- Advertisement -

ಬಾಹುಬಲಿ ಸಿನಿಮಾ ಬಲ್ಲಾಳ ದೇವ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ರಾಣಾ ದಗ್ಗುಬಾಟಿ ಆರೋಗ್ಯದ ಬಗ್ಗೆ ಕಳೆದ ಕೆಲ ಸಮಯಗಳಿಂದ ಸುದ್ದಿಗಳು ಹರಿದಾಡುತ್ತಲೇ ಇವೆ. ಇದೀಗ ರಾಣಾ ಸಂದರ್ಶನವೊಂದರಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.

ಹೌದು… ಇತ್ತೀಚಿಗೆ ಖಾಸಗಿ ಸಂದರ್ಶವೊಂದರಲ್ಲಿ ತಮ್ಮ ಆರೋಗ್ಯದ ಸಮಸ್ಯೆ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ನಟಿ ಸಮಂತಾ ಅಕ್ಕಿನೇನಿ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಸಾಮ್​-ಜಾಮ್​ ಕಾರ್ಯಕ್ರಮದಲ್ಲಿ ರಾಣಾ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸ್ಕ್ರೀನ್​ ಮೇಲೆ ಗಟ್ಟಿಮುಟ್ಟಾಗಿ ಕಾಣುವ ರಾಣಾ ಅನೇಕ ಆರೋಗ್ಯ ಸಮಸ್ಯೆಯನ್ನು ಅನುಭವಿಸಿದ್ದಾರಂತೆ. ನನಗೆ ಹೃದಯ ಸಂಬಂಧಿ ಸಮಸ್ಯೆಯಿದೆ ಹಾಗೂ ಕಿಡ್ನಿ ವೈಫಲ್ಯವಾಗಿದೆ. ಇದರಿಂದ ಶೇಕಡಾ 70ರಷ್ಟು ಪಾರ್ಶ್ವವಾಯು ಆಗಬಹುದು. ಅಥವಾ ನನಗೆ ಶೇಕಡಾ30ರಷ್ಟು ಸಾವು ಸಂಭವಿಸುವ ಸಾಧ್ಯತೆಗಳಿವೆ ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

ಈ ವೇಳೆ ಸಮಂತಾ, ನೀವು ಮಾತ್ರ ಬಂಡೆಯಂತೆ ಗಟ್ಟಿಯಾಗಿದ್ದೀರಿ, ಅದು ನಮಗೆ ಕಾಣುತ್ತಿದೆ. ನೀವು ಯಾವಗಲೂ ಸೂಪರ್​ ಹೀರೋ ಎಂದು ಹುರಿದುಂಬಿಸಿದ್ದಾರೆ. ಇನ್ನು ನಟ ರಾಣಾ ದಗ್ಗುಬಾಟಿ ಇತ್ತೀಚಿಗೆ ತಮ್ಮ ದೀರ್ಘ ಕಾಲದ ಗೆಳತಿ ಉದ್ಯಮಿ ಮಿಹಿಕಾ ಬಜಾಜ್​ ಜೊತೆ ವಿವಾಹವಾಗಿದ್ದರು.

- Advertisement -

Latest News

error: Content is protected !!