Thursday, June 4, 2026
Homeತಾಜಾ ಸುದ್ದಿಪುತ್ತೂರಿನ ಪ್ರಶಾಂತ್‌ ರೈ ಕರ್ನಾಟಕ ಕಬಡ್ಡಿ ತಂಡಕ್ಕೆ ಸಾರಥಿ

ಪುತ್ತೂರಿನ ಪ್ರಶಾಂತ್‌ ರೈ ಕರ್ನಾಟಕ ಕಬಡ್ಡಿ ತಂಡಕ್ಕೆ ಸಾರಥಿ

- Advertisement -
- Advertisement -

ಬೆಂಗಳೂರು: ಪುತ್ತೂರು ಮೂಲದ ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈ ಕೈಕಾರ ರವರು ರಾಷ್ಟ್ರೀಯ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ಕಬಡ್ಡಿ ತಂಡಕ್ಕೆ ನಾಯಕತ್ವ ವಹಿಸಿಕೊಂಡಿದ್ದಾರೆ. ಕರ್ನಾಟಕ ತಂಡವನ್ನು ಪ್ರಶಾಂತ್ ರೈ ಅವರು ಮುನ್ನಡೆಸಲಿದ್ದಾರೆ.

ಹರಿಯಾಣದ ಚಾರ್ಕಿ ದಾದ್ರಿಯಲ್ಲಿ ಜುಲೈ 21ರಿಂದ ಜುಲೈ 24ರವರೆಗೆ 69ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 30 ತಂಡಗಳು ಭಾಗವಹಿಸಲಿವೆ. ಪ್ರೋ ಕಬ್ಬಡಿಯಲ್ಲಿ ಆಡಿರುವ ಸ್ಟಾರ್ ಆಟಗಾರರು ಈ ಟೂರ್ನಿಯ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

- Advertisement -

Latest News

error: Content is protected !!