Thursday, June 25, 2026
Homeಕರಾವಳಿಮಂಗಳೂರುಪುತ್ತೂರು: ಸಾಮಾಗ್ರಿ ಖರೀದಿಗಾಗಿ ಅಂಗಡಿಗೆ ಬಂದು ದಾಂಧಲೆ

ಪುತ್ತೂರು: ಸಾಮಾಗ್ರಿ ಖರೀದಿಗಾಗಿ ಅಂಗಡಿಗೆ ಬಂದು ದಾಂಧಲೆ

- Advertisement -
- Advertisement -

ಪುತ್ತೂರು: ಸಾಮಾಗ್ರಿ ಖರೀದಿಗಾಗಿ ಅಂಗಡಿಗೆ ಬಂದು ಇಬ್ಬರು ಯುವಕರು ದಾಂಧಲೆ ನಡೆಸಿ ಅಂಗಡಿ  ಮಾಲಕಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಪಾಣಾಜೆಯಲ್ಲಿ ನಡೆದಿದೆ.

ಜ.18ರಂದು ರಾತ್ರಿ 8.30 ಗಂಟೆಗೆ ಆರ್ಲಪದವು ಸೈಡ್‌ನಿಂದ ವಿಮಲ (45) ಅವರ ಅಂಗಡಿಗೆ ಬಂದ ಪುನೀತ್ ಮತ್ತು ಅಜಯ್ ಎಂಬವರು ಸಾಮಾನು ಖರೀದಿಸುವ ನೆಪದಲ್ಲಿ ಜಗಳ ತೆಗೆದು ದಾಂಧಲೆ ನಡೆಸಿ ಅಂಗಡಿಯೊಳಗಿದ್ದ ಚಾಕಲೇಟ್, ಬಿಸ್ಕೆಟ್, ಇನ್ನಿತರ ವಸ್ತುಗಳನ್ನು ಹೊರಗೆ ಬಿಸಾಡಿ ಹಾಳುಗೆಡವಿ ಸುಮಾರು 5,000 ರೂ. ನಷ್ಟವುಂಟು ಮಾಡಿದ್ದಲ್ಲದೇ, ನೀನು ಪಂಚಾಯತ್ ಸದಸ್ಯೆ ಅಲ್ಲವಾ? ನಿನ್ನನ್ನು ನಿನ್ನ ಅಂಗಡಿಯನ್ನು ಹುಡಿ ಮಾಡುತ್ತೇನೆ, ನಿನ್ನ ಮನೆಗೆ ನುಗ್ಗಿ, ನಿನ್ನ ಮನೆಯವರನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ವಿಮಲ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸರು BNS (4),351 (2) 3(5),352 22-2023 ಪ್ರಕರಣ (0008/2026)ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!