Saturday, June 6, 2026
Homeಕರಾವಳಿಮಂಗಳೂರುಪುತ್ತೂರು; ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು

ಪುತ್ತೂರು; ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು

- Advertisement -
- Advertisement -

ಪುತ್ತೂರು; ವಿದ್ಯುತ್ ತಂತಿ ತಗುಲಿ ಮಹಿಳೆ ಸಾವನ್ನಪ್ಪಿರುವ ಘಟನೆ ಅರಿಯಡ್ಕ ಗ್ರಾಮದ ಬೇಂಗತ್ತಡ್ಕ ಎಂಬಲ್ಲಿ ನಡೆದಿದೆ.ಅರಿಯಡ್ಕ ಗ್ರಾಮದ ಬೇಂಗತ್ತಡ್ಕ ನಿವಾಸಿ ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ (59) ಮೃತ ಮಹಿಳೆ.

ಭಾಗೀರಥಿ ಅವರು ಮನೆಯ ತಾರಸಿಯ ಮೇಲೆ ಬದಿಯಲ್ಲಿ ಮಳೆನೀರು ತುಂಬಿಕೊಂಡಿತ್ತು. ಭಾಗೀರಥಿ ಅವರು ತಾರಸಿಗೆ ಹೋಗಿ ಸ್ವಚ್ಛ ಮಾಡುತ್ತಿದ್ದ ವೇಳೆ ಮನೆಯ ಬದಿಯಲ್ಲಿ ಹಾದು ಹೋಗಿದ್ದ ಕೊಳವೆಬಾವಿ ಸಂಪರ್ಕದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ್ದಾರೆ ಪರಿಣಾಮ ಸಾವನ್ನಪ್ಪಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!