- Advertisement -
![]()
- Advertisement -
ಪುತ್ತೂರು: ಇಸ್ರೇಲ್ ನಿಂದ ರಜೆ ಮೇಲೆ ಊರಿಗೆ ಬಂದಿದ್ದ ಯುವಕ ಸಂಬಂಧಿಕರ ಮನೆಯಲ್ಲಿ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ಘಟನೆ ಪುತ್ತೂರು ತಾಲೂಕಿನ ನಿಡಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾಸನದ ಬೇಲೂರು ತಾಲೂಕಿನ ಅಂಕಿಹಳ್ಳಿ ನಿವಾಸಿ ಜೊಆಕಿಂ ಪಿಂಟೋ ಅವರ ಪುತ್ರ ರೋಶನ್ ಪಿಂಟೋ (29 ಮೃತರು.
ರೋಶನ್ ಪಿಂಟೋ ಅವರು ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ರಜೆ ಮೇಲೆ ಕುಟುಂಬದೊಂದಿಗೆ ಊರಿಗೆ ಬಂದಿದ್ದರು. ಅವರು ತಮ್ಮ ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪುತ್ತೂರಿನ ನಿಡಳ್ಳಿ ಗ್ರಾಮದ ಬೊಳುಂಬುಡೆಯಲ್ಲಿರುವ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ರೋಶನ್ ರಾತ್ರಿ ಸ್ನಾನ ಮುಗಿಸಿ ಬಟ್ಟೆ ಒಗೆಯುವಲ್ಲಿಗೆ ಹೋದಾಗ ಅಲ್ಲಿದ್ದ ವಿದ್ಯುತ್ ವಯರ್ ತಗುಲಿ ರೋಶನ್ ಬಿದ್ದಿದ್ದಾರೆ. ತಕ್ಷಣವೇ ಸಂಬಂಧಿಕರು ಮತ್ತು ಸ್ಥಳೀಯರು ಸೇರಿ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
- Advertisement -


