Saturday, June 6, 2026
Homeಕರಾವಳಿಉಡುಪಿಉಡುಪಿ: ಮನೆಯಲ್ಲಿ ಮೊಬೈಲ್ ಫೋನ್ ಕೊಡದಿದ್ದಕ್ಕೆ ಬಾವಿಗೆ ಹಾರಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

ಉಡುಪಿ: ಮನೆಯಲ್ಲಿ ಮೊಬೈಲ್ ಫೋನ್ ಕೊಡದಿದ್ದಕ್ಕೆ ಬಾವಿಗೆ ಹಾರಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಉಡುಪಿ: ಮನೆಯಲ್ಲಿ ಮೊಬೈಲ್ ಫೋನ್ ಕೊಡಲಿಲ್ಲ ಎಂಬ ಕಾರಣಕ್ಕೆ ಪಿಯುಸಿ ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದೆ.

ಹಿರಿಯಡ್ಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರಥಮೇಶ್ (೧೬) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ.

ಮೊಬೈಲ್ ಫೋನ್ ಕೊಡದ ಕಾರಣಕ್ಕೆ ವಿದ್ಯಾರ್ಥಿ ಪ್ರಥಮೇಶ್ ನಿನ್ನೆ ಮನೆಯಿಂದ ಕಾಣೆಯಾಗಿದ್ದು,ಇಂದು ಬೆಳಿಗ್ಗೆ ಕಾಲೇಜು ಸಮೀಪದ ಮನೆಯ ಬಾವಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಜನ ವಸತಿ ಇಲ್ಲದ ಪ್ರದೇಶದಲ್ಲಿರುವ ಬಾವಿಗೆ ಪ್ರಥಮೇಶ್ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!