Saturday, October 17, 2026
Homeಕರಾವಳಿಬೆಳ್ತಂಗಡಿ : ಉಜಿರೆಯಲ್ಲಿ ನೇಣುಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಬೆಳ್ತಂಗಡಿ : ಉಜಿರೆಯಲ್ಲಿ ನೇಣುಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ: ಉಜಿರೆ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಮಹಮ್ಮದ್ ಅಯಾನ್(17) ಅಪಾರ್ಟ್ಮೆಂಟ್‌ನ ರೂಂನಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ.15 ರಂದು ಸಂಜೆ ನಡೆದಿದೆ.

ಮೊಹಮ್ಮದ್ ಇಲಿಯಾಸ್ ಅವರ ಎರಡನೇ ಪುತ್ರ. ಈತ ಲಾಯಿಲದ ಕಾಶಿಬೆಟ್ಟುನಲ್ಲಿರುವ ಅಭ್ಯಾಸ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಗೆ ತೇರ್ಗಡೆಯಾಗಿದ್ದ.

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!