Thursday, June 4, 2026
Homeತಾಜಾ ಸುದ್ದಿಜೂನ್.9ರಿಂದ ಪಿಯು ತರಗತಿಗಳು ಆರಂಭ

ಜೂನ್.9ರಿಂದ ಪಿಯು ತರಗತಿಗಳು ಆರಂಭ

- Advertisement -
- Advertisement -

ಬೆಂಗಳೂರು: ಜೂನ್.9ರಿಂದ 2022-23ನೇ ಸಾಲಿನ ಪಿಯು ತರಗತಿಗಳು ಆರಂಭಗೊಳ್ಳಲಿದೆ. ಅಲ್ಲದೇ ಮೇ.20ರಿಂದ ಪ್ರಥಮ ಪಿಯು ದಾಖಲಾತಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಜೂನ್ 1ರಿಂದ ದ್ವಿತೀಯ ಪಿಯು ಪ್ರಕ್ರಿಯೆ ಆರಂಭಿಸುವಂತೆ ಪಿಯು ಬೋರ್ಡ್ ತಿಳಿಸಿದೆ.

ಈ ಸಂಬಂಧ 128 ಪುಟಗಳ ಮಾರ್ಗಸೂಚಿಯನ್ನು ಪ್ರಕಟಿಸಿರುವಂತ ಪಿಯು ಬೋರ್ಡ್, 2022-23ನೇ ಸಾಲಿನ ಶೈಕ್ಷಣಿಕ ಅವಧಿ ಜೂನ್ 9 ರಿಂದ ಆರಂಭಗೊಂಡು ಸೆಪ್ಟೆಂಬರ್ 30ರವರೆಗೆ ನಡೆಸುವಂತೆ ತಿಳಿಸಿದೆ.

ಇನ್ನೂ 2ನೇ ಅವಧಿ ಅಕ್ಟೋಬರ್ 13 ರಿಂದ ಮಾರ್ಚ್ 31, 2023ರವರೆಗೆ ನಡೆಸಲು ನಿಗದಿ ಪಡಿಸಲಾಗಿದೆ. ಅಲ್ಲದೇ ಜೂನ್.30ರವರೆಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ದಾಖಲಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.

ಪ್ರಥಮ ಪಿಯುಸಿಗೆ ದಂಡ ಶುಲ್ಕವಿಲ್ಲದೇ ಜೂನ್.15 ಕೊನೆಯ ದಿನವಾಗಿದೆ. ಜೂನ್.1 ರಿಂದ 15ರವರೆಗೆ ದ್ವಿತೀಯ ಪಿಯು ದಾಖಲಾತಿಗೆ ಅವಕಾಶ ನೀಡಲಾಗಿದೆ. ಜೂನ್.30 ದಂಡ ಶುಲ್ಕದೊಂದಿಗೆ ದಾಖಲಾಗಲು ಕೊನೆಯ ದಿನವಾಗಿದೆ. ಅಕ್ಟೋಬರ್ 1 ರಿಂದ 12ರವರೆಗೆ ಮಧ್ಯಂತರ ರಜೆಯನ್ನು ನೀಡಲಾಗಿದೆ. ಅಲ್ಲದೇ ಏಪ್ರಿಲ್ 1ರಿಂದ ಬೇಸಿಗೆ ರಜೆಯನ್ನು ಘೋಷಿಸಲಾಗಿದೆ.

- Advertisement -

Latest News

error: Content is protected !!