Saturday, May 4, 2024
Homeಕರಾವಳಿಸುಬ್ರಹ್ಮಣ್ಯ:  ಹರಿಹರದಲ್ಲಿ ಮದ್ಯದಂಗಡಿ ತೆರೆಯುವ ವಿರುದ್ಧ ಪ್ರತಿಭಟನೆ; ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ...

ಸುಬ್ರಹ್ಮಣ್ಯ:  ಹರಿಹರದಲ್ಲಿ ಮದ್ಯದಂಗಡಿ ತೆರೆಯುವ ವಿರುದ್ಧ ಪ್ರತಿಭಟನೆ; ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

spot_img
- Advertisement -
- Advertisement -

ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವ ವಿರುದ್ಧ ಮದ್ಯ ಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಹರಿಹರ ಮುಖ್ಯ ಪೇಟೆಯಲ್ಲಿ ಸೆ.29ರ ಗುರುವಾರ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಪ್ರತಿಭಟನೆ ಸ್ಥಳದಲ್ಲಿ ನೂರಾರು ಮಂದಿ, ಮಹಿಳೆಯರು, ನಾಗರಿಕರು ಸೇರಿದ್ದರು. ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲಿ ಮದ್ಯದಂಗಡಿ ಪರವಾದ ಅಪರಿಚಿತ ವ್ಯಕ್ತಿಯೊಬ್ಬ ವೀಡಿಯೊ ಚಿತ್ರೀಕರಣ ಮಾಡುತ್ತಿರುವುದನ್ನು  ಕಂಡು ಸ್ಥಳದಲ್ಲಿದ್ದವರು ವ್ಯಕ್ತಿಯನ್ನು ಹಿಡಿದು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಪರಿಸ್ಥಿತಿ ಅರಿತ ಸ್ಥಳದಲ್ಲಿದ್ದ ಸುಬ್ರಹ್ಮಣ್ಯ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು, ವಾಹನದಲ್ಲಿರಿಸಿಕೊಂಡರು. ಈ ವೇಳೆ ಆಕ್ರೋಶಗೊಂಡ ಮಹಿಳೆಯರು ವ್ಯಕ್ತಿಯನ್ನು ತಮಗೆ ನೀಡುವಂತೆ ಒತ್ತಾಯಿಸಿ ಪೊಲೀಸ್ ವಾಹನ ತಡೆದು ಬಿಗು ಪಟ್ಟು ಹಿಡಿದರು. ಪೊಲೀಸ್ ಜೀಪ್‌ಗೆ ಅಡ್ಡ ನಿಂತು  ಪ್ರತಿಭಟನಾಕಾರರು ಪ್ರತಿಭಟಿಸಿದ ಪ್ರಸಂಗವೂ ನಡೆಯಿತು.

- Advertisement -
spot_img

Latest News

error: Content is protected !!