Thursday, April 25, 2024
Homeಕರಾವಳಿಮಂಗಳೂರು : ಪಿಲಿಕುಳ ನಿಸರ್ಗ ಧಾಮದಲ್ಲಿ ನಡೆಯುತ್ತಿದೆ ಗೋಲ್ ಮಾಲ್?: ಪ್ರಾಣಿ,ಪಕ್ಷಿಗಳಿಗಿಲ್ಲ ಆಹಾರ, ರಕ್ಷಣೆ?

ಮಂಗಳೂರು : ಪಿಲಿಕುಳ ನಿಸರ್ಗ ಧಾಮದಲ್ಲಿ ನಡೆಯುತ್ತಿದೆ ಗೋಲ್ ಮಾಲ್?: ಪ್ರಾಣಿ,ಪಕ್ಷಿಗಳಿಗಿಲ್ಲ ಆಹಾರ, ರಕ್ಷಣೆ?

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಪಿಲಿಕುಳ ನಿಸರ್ಗಧಾಮದಲ್ಲಿ
ಪ್ರಾಣಿ ಪಕ್ಷಿಗಳಿಗೆ ಸರಿಯಾಗಿ ಆಹಾರ ಹಾಗೂ ರಕ್ಷಣೆ ನೀಡುತ್ತಿಲ್ಲ‌ ಎಂಬ ಆರೋಪ‌ ಕೇಳಿ‌ ಬಂದಿದೆ.

ಅಲ್ಲದೇ  ಪ್ರಾಣಿ ಪಕ್ಷಿಗಳ ಬಗ್ಗೆ ಪಿಲಿಕುಳದಲ್ಲಿ ಸರಿಯಾದ ಲೆಕ್ಕ ಕೂಡ ಇಲ್ಲವಾಗಿದೆ. ಪಿಲಿಕುಳದ ಪ್ರತಿಯೊಂದು ಪ್ರಾಣಿ ಪಕ್ಷಿಗಳ ನಿರ್ವಹಣೆಗೆ ಖಾಸಗಿ ಕಂಪನಿಗಳು ಪ್ರತಿ ತಿಂಗಳು ಹಣ ನೀಡುತ್ತಿವೆ.‌ಆದರೆ ಇಲ್ಲಿನ ಅಧಿಕಾರಿಗಳು ಸರಿಯಾಗಿ ಆಹಾರ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಹಾಗೇ ಮೃಗಾಲಯದಲ್ಲಿರುವ ಜಿಂಕೆ , ಕೃಷ್ಣಮೃಗಗಳ ಲೆಕ್ಕದಲ್ಲಿ ವ್ಯತ್ಯಾಸ ಇದ್ದು , ಮೊದಲು 40 ಇದ್ದ ಲೆಕ್ಕ ಈಗ 12 ಕ್ಕೆ ಬಂದಿಳಿದಿದೆ. ಆದ್ರೆ ಖಾಸಗಿ ಕಂಪನಿಯವರು 40 ಜಿಂಕೆ, ಕೃಷ್ಣಮೃಗಕ್ಕೆ ಆಹಾರ ನೀಡುತ್ತಿದ್ದಾರೆ. ಪ್ರಾಣಿ ಪಕ್ಷಿಗಳ ಕೊಠಡಿಗಳು ಸೋರಿ ನೀರು ಹೋಗಿ ಒದ್ದೆಯಾಗುತ್ತಿದೆ. ಆದರೂ ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಸರಿಯಾಗಿ ನೋಡಿಕೊಳ್ಳದೆ ಅವ್ಯವಸ್ಥೆಯ ಗೂಡಾದ ಪಿಲಿಕುಳ ನಿಸರ್ಗಧಾಮ ಕಳೆದ ಒಂದು ವರ್ಷದಿಂದ ಸರಕಾರದ ವಶದಲ್ಲಿದ್ದು , ಅಭಿವೃದ್ಧಿಗೆ  ಯಾವುದೇ ರೀತಿಯಲ್ಲಿ ಇನ್ನೂ ಸರಕಾರದಿಂದ ಹಣ ಬಂದಿಲ್ಲ ಅದರಿಂದ ಖಾಸಗಿ ಕಂಪನಿಯಿಂದ ಹಣ ಸಹಾಯ ಬರುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಾಣಿಗಳು‌ ನರಕಯಾತನೆ ಅನುಭವಿಸುವಂತಾಗಿದೆ..

- Advertisement -
spot_img

Latest News

error: Content is protected !!