Saturday, April 27, 2024
Homeಕ್ರೀಡೆಯುವ ಆಟಗಾರ ಪ್ರಥ್ವಿ ಶಾ ಡೇಟಿಂಗ್ ಮಾಡುತ್ತಿರುವ ನಟಿ ಯಾರು?

ಯುವ ಆಟಗಾರ ಪ್ರಥ್ವಿ ಶಾ ಡೇಟಿಂಗ್ ಮಾಡುತ್ತಿರುವ ನಟಿ ಯಾರು?

spot_img
- Advertisement -
- Advertisement -

ಮುಂಬೈ: ಟೀಂ ಇಂಡಿಯಾ ಆರಂಭಿಕ ಆಟಗಾರ 20 ವರ್ಷದ ಪೃಥ್ವಿ ಶಾ ಬಾಲಿವುಡ್ ಯುವ ನಟಿಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

2018ರಲ್ಲಿ ವಿಶ್ವಕಪ್ ಗೆದ್ದ ಭಾರತೀಯ ತಂಡದಲ್ಲಿದ್ದ ಪ್ರಥ್ವಿ ಶಾ ಈಗಾಗಲೇ ತನ್ನ ಪ್ರತಿಭೆಯಿಂದ ಕ್ರಿಕೆಟಿನಲ್ಲಿ ಗಮನ ಸೆಳೆದಿದ್ದಾರೆ. ಅದೇ ರೀತಿ ಅವರು ನಟಿ ಪ್ರಾಚಿ ಸಿಂಗ್ ಅವರ ಜತೆಗೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ತಿಳಿದುಬಂದಿದೆ.

ಉಡಾನ್ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದಿರುವ ಪ್ರಾಚಿ ಅವರು ಇನ್ ಸ್ಟಾಗ್ರಾಂನಲ್ಲಿ ಹಾಕಿರುವಂತಹ ಕೆಲವೊಂದು ಪೋಸ್ಟ್ ಗಳು ಪ್ರಥ್ವ ಶಾ ಜತೆಗೆ ಸಂಬಂಧ ಇರುವುದು ಖಚಿತಪಡಿಸಿದೆ.

ಯುವ ನಟಿ ಪ್ರಾಚಿ ಸಿಂಗ್ ಹೆಸರು ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಸಾಕಷ್ಟು ಕೇಳಿ ಬರುತ್ತಿದೆ. ಪ್ರಾಚಿ ಸಿಂಗ್ ಸದ್ಯ ಕಲರ್ಸ್ ವಾಹಿನಿಯ ಉಡಾನ್ ಎಂಬ ಸೀರಿಸ್‍ನಲ್ಲಿ ನಟಿಸುತ್ತಿದ್ದು, ಪೃಥ್ವಿ ಶಾ ಮತ್ತು ಪ್ರಾಚಿ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟೀವ್ ಆಗಿರುವುದರಿಂದ ಇಬ್ಬರು ಪ್ರೀತಿಯಲ್ಲಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೃಥ್ವಿ ಶಾ, 3 ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2018 ರಿಂದಲೂ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದು, ಇದುವರೆಗೂ 25 ಪಂದ್ಯಗಳಿಂದ 598 ರನ್ ಸಿಡಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕಗಳೂ ಸೇರಿದ್ದು, 99 ರನ್ ಗರಿಷ್ಠ ಸ್ಕೋರ್ ಆಗಿದೆ. ಸೆ.19 ರಿಂದ ನ.10ರವರೆಗೂ ಐಪಿಎಲ್ ಟೂರ್ನಿ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಶಿಖರ್ ಧವನ್‍ರೊಂದಿಗೆ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ.

- Advertisement -
spot_img

Latest News

error: Content is protected !!