Thursday, June 4, 2026
Homeಕರಾವಳಿಬಿಡುಗಡೆಗೆ ಸಜ್ಜಾದ ಪೃಥ್ವಿ ಅಂಬಾರ್‌ ನಟನೆಯ ‘ಭುವನಂ ಗಗನಂ’ ಸಿನಿಮಾ

ಬಿಡುಗಡೆಗೆ ಸಜ್ಜಾದ ಪೃಥ್ವಿ ಅಂಬಾರ್‌ ನಟನೆಯ ‘ಭುವನಂ ಗಗನಂ’ ಸಿನಿಮಾ

- Advertisement -
- Advertisement -

ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌ ಹಾಗೂ ‘ರತ್ನನ್‌ ಪ್ರಪಂಚ’, ‘ಸಲಾರ್‌’ ಖ್ಯಾತಿಯ ಪ್ರಮೋದ್‌ ನಟನೆಯ ‘ಭುವನಂ ಗಗನಂ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿರ್ಮಾಪಕ ಎಂ.ಮುನೇಗೌಡ ಜನ್ಮದಿನದ ಸಂದರ್ಭದಲ್ಲಿ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೀಸರ್ ಅನಾವರಣ ಮಾಡಿ ಶುಭ ಕೋರಿದರು.

ನಟ ಪ್ರಮೋದ್ ಸಿನಿಮಾದ ಕುರಿತು ಮಾತನಾಡಿ, ‘ಇದು ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಸಿನಿಮಾ. ಏಕೆಂದರೆ ನಾನು ಲವ್ ಸ್ಟೋರಿ ಸಿನಿಮಾ ಮಾಡಿರಲಿಲ್ಲ. ಈ ರೀತಿಯ ಸಿನಿಮಾ ಮಾಡಿದರೆ ತುಂಬಾ ಜನರಿಗೆ ತಲುಪುತ್ತದೆ. ಸಿನಿಮಾ ಚಿತ್ರೀಕರಣದ ವೇಗ ಬಹಳ ಕಡಿಮೆಯಿತ್ತು. ಇದೀಗ ಡಬ್ಬಿಂಗ್ ಶುರುವಾಗಿದೆ. ಆ ಸಂದರ್ಭದಲ್ಲಿ ನಿರ್ದೇಶಕರಾದ ಗಿರೀಶ್‌ ಅವರ ಕೆಲಸದ ಕ್ರಮ ಅರ್ಥವಾಯಿತು. ಅವರಂದುಕೊಂಡಂತೆ ಸಿನಿಮಾ ಮೂಡಿಬಂದಿದೆ’ ಎಂದರು. 

ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾ, ನಗರ, ಹಳ್ಳಿ ಹೀಗೆ ಎರಡು ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದೆ. ಪ್ರಮೋದ್‌ಗೆ ಜೋಡಿಯಾಗಿ ‘ಲವ್ ಮಾಕ್ಟೇಲ್’ ಖ್ಯಾತಿಯ ರೇಚಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ಅಶ್ವಥಿ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ‘ಸಿದ್ಲಿಂಗು’ ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ತಾರಾಬಳಗದಲ್ಲಿದ್ದಾರೆ. ಜೂನ್‌ನಲ್ಲಿ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. 

- Advertisement -

Latest News

error: Content is protected !!