ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯದಿಂದ ಒಟ್ಟು ಹದಿನಾರು ಪೊಲೀಸ್ ಅಧಿಕಾರಿ ಗಳು ಮತ್ತು ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಲಭಿಸಿದೆ.
ಉಡುಪಿ ಡಿಸಿಆರ್ ಬಿ ಸಿಹೆಚ್ ಸಿ ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ದೊರೆತಿದೆ.
ಇದೇ ವೇಳೆ ರಾಜ್ಯದ 126 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.
ಮೂಡಬಿದಿರೆ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ., ಮಂಗಳೂರು ಸಿಸಿಬಿ ಪಿಎಸ್ ಐ ಶರಣಪ್ಪ ಭಂಡಾರಿ, ಬ್ರಹ್ಮಾವರ ಠಾಣೆ ಪಿಎಸ್ ಐ ಮಧು ಬಿ.ಇ., ಮಂಗಳೂರು ಸಿಸಿಬಿ ಎಎಸ್ಐ ಮೋಹನ್ ಕೆ.ವಿ., ಪುತ್ತೂರು ಗ್ರಾಮಾಂತರ ಠಾಣೆ ಸಿಹೆಚ್ ಸಿ ಅದ್ರಾಮ ಎನ್., ಮಂಗಳೂರು ಸಿಸಿಬಿ ಹೆಡ್ ಕಾನ್ ಸ್ಟೇಬಲ್ ನಾಗರಾಜ ಚಂದರಗಿ, ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಹೆಡ್ ಕಾನ್ ಸ್ಟೇಬಲ್ ವಿ.ಪಿ. ಮನ್ನಿಕೇರಿ ಅವರಿಗೆ ಮುಖ್ಯಮಂತ್ರಿಗಳ ಪದಕ ಘೋಷಣೆಯಾಗಿದೆ.
ಅಲ್ಲದೇ, ಬೆಂಗಳೂರು ನಗರದ ವಿಲ್ಸನ್ ಗಾರ್ಡನ್ ಸಂಚಾರ ಠಾಣೆ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಕಾತ್ಯಾಯಿನಿ ಆಳ್ವ ಮತ್ತು ಉತ್ತರ ಕನ್ನಡ ಜಿಲ್ಲೆಯ ಕದ್ರಾ ವೃತ್ತ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರನ್ನೂ ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿದೆ.