Saturday, May 18, 2024
Homeಕರಾವಳಿಆಲ್ ಇಂಡಿಯಾ ವುಮನ್ಸ್ ಆಚೀವ್ ಮೆಂಟ್ ಅವಾರ್ಡ್ 2023ಕ್ಕೆ ಪಾತ್ರರಾದ ಪ್ರೇಮಾ ಆರ್ ಶೆಟ್ಟಿ

ಆಲ್ ಇಂಡಿಯಾ ವುಮನ್ಸ್ ಆಚೀವ್ ಮೆಂಟ್ ಅವಾರ್ಡ್ 2023ಕ್ಕೆ ಪಾತ್ರರಾದ ಪ್ರೇಮಾ ಆರ್ ಶೆಟ್ಟಿ

spot_img
- Advertisement -
- Advertisement -

ಬೆಂಗಳೂರು; ಟ್ವೆಲ್ ಟೆಲಿ ಮೀಡಿಯಾ ಇವರು ಪ್ರಸ್ತುತ ಪಡಿಸುವ ನೇಷನಲ್ ವುಮನ್ಸ್ ಸೆಲ್ ಇಂಟರ್ ನೇಷನಲ್ ಹ್ಯೂಮನ್ ರೈಟ್ಸ್ ಅಸೋಸಿಯೇಶನ್ ಮತ್ತು ಅದರ ಸ್ಟೇಟ್ ಸೆಕ್ರೆಟರಿ ಅವರು ಆಯೋಜಿಸಿ ಪ್ರತಿ ವರ್ಷ ಕೊಡಮಾಡುವ ಆಲ್ ಇಂಡಿಯಾ ವುಮನ್ಸ್ ಆಚೀವ್ ಮೆಂಟ್ ಅವಾರ್ಡ್ 2023 ಇದಕ್ಕೆ ಖ್ಯಾತ ಕವಯತ್ರಿ, ಅಂಕಣಗಾರ್ತಿ, ಬರಹಗಾರ್ತಿ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆಂಗ್ಲ ಭಾಷಾ ಶಿಕ್ಷಕಿ ಪ್ರೇಮಾ ಆರ್ ಶೆಟ್ಟಿ ಇವರು ಆಯ್ಕೆ ಆಗಿರುತ್ತಾರೆ.

  AIVAA ಅವಾರ್ಡ್, ಸರ್ಟಿಫಿಕೇಟ್, ಮತ್ತು ಪ್ರಶಸ್ತಿ ಫಲಕವನ್ನು ಇದು ಒಳಗೊಂಡಿರುತ್ತದೆ. ದಿನಾಂಕ 25.06.2023ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ಚಲನಚಿತ್ರ ನಟಿಯರಾದ ಶ್ರೀಮತಿ ಪ್ರಿಯಾಂಕ ಉಪೇಂದ್ರ, ಅನು ಪ್ರಭಾಕರ್, ಹಾಗೂ ಪರಿಮಳಾ ಜಗ್ಗೇಶ್ , ಸಿದ್ದಾರ್ಥ, ದೀಪಕ್ ಜೈನ್ ಮೊದಲಾದವರ  ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಸಾಧಕ ಮಹಿಳೆಯರಿಗೆ ಈ ಪ್ರಶಸ್ತಿ ಸಮಾರಂಭ ಏರ್ಪಡಿಸಲಾಗಿತ್ತು. ಪ್ರೇಮಾ ಮೇಡಂ ಅವರ ಕನ್ನಡ , ತುಳು ಹಾಗೂ ಆಂಗ್ಲ ಸಾಹಿತ್ಯದ  ಕೊಡುಗೆಗೆ ಈ ಗೌರವ ಸಂದಿದೆ. ನಾಲ್ಕು ಹಂತಗಳ ಟೆಲಿ ವೇರಿಫಿಕೇಶನ್, ಜೂರಿ ವೇರಿಫಿಕೇಶನ್,  ಸಂದರ್ಶನ, ಸಾಧನೆಯ ದಾಖಲೆಗಳ ಆಧಾರದ ಮೇಲೆ ಈ ಪ್ರಶಸ್ತಿಯನ್ನು ದೇಶದ ಸಾಧಕ ಮಹಿಳೆಯರಿಗೆ ನೀಡಲಾಗುತ್ತದೆ.

- Advertisement -
spot_img

Latest News

error: Content is protected !!