Friday, June 5, 2026
Homeಇತರಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ 7 ತಿಂಗಳ ಗರ್ಭಿಣಿಗೂ ಕೋವಿಡ್ ಪಾಸಿಟಿವ್.. ಪತಿಗೂ ಸೋಂಕು...

ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ 7 ತಿಂಗಳ ಗರ್ಭಿಣಿಗೂ ಕೋವಿಡ್ ಪಾಸಿಟಿವ್.. ಪತಿಗೂ ಸೋಂಕು ದೃಢ

- Advertisement -
- Advertisement -

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ಬಳ್ಳಾವರದ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಗೆ ಸಂಕಷ್ಟ ಎದುರಾಗಿದೆ. ಏಳು ತಿಂಗಳ ಗರ್ಭೀಣಿಯಾಗಿದ್ದರೂ ರಜೆ ಪಡೆದುಕೊಳ್ಳದಂತಹ ಸ್ಥಿತಿ ನರ್ಸ್ ಗೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ಕೊರೋನಾ ವಾರಿಯರ್ ಆಗಿ ನರ್ಸ್ ಕರ್ತವ್ಯ ಮಾಡುತ್ತಿದ್ದರು. ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಿದ್ದೇ ಇದೀಗ ಕಂಟಕವಾಗಿ ಪರಿಣಮಿಸಿದ್ದು, ಸ್ವತಃ ನರ್ಸ್ ಗೂ ಕೂಡ ಶಾಕ್ ಆಗಿದೆ. ಕೊರೊನಾ ಪಾಸಿಟಿವ್ ಇರೋದು ದೃಢವಾಗಿದೆ.

ಕೇವಲ ನರ್ಸ್ ಗೆ ಮಾತ್ರವಲ್ಲ, ಆಕೆಯ ಪತಿಗೂ ಕೊರೋನಾ ವಕ್ಕರಿಸಿದೆ. ಕೊರೋನಾ ಸಂಕಷ್ಟ ಸಮಯದಲ್ಲಿ ಹತ್ತಾರು ಜನರಿಗೆ ಚಿಕಿತ್ಸೆ ನೀಡಿದ ಜನರಿಗೆ ಇದೀಗ ಆತಂಕ ಎದುರಾಗಿದ್ದು, ಬಳ್ಳಾವರದ ಸುತ್ತಮುತ್ತಲಿನ ಜನರಿಗೆ ಕೊರೊನಾ ಆತಂಕ ಎದುರಾಗಿದೆ.

- Advertisement -

Latest News

error: Content is protected !!