Wednesday, May 15, 2024
Homeಕರಾವಳಿಉಡುಪಿಕುಂದಾಪುರ: ವರದಕ್ಷಿಣೆ ತರುವಂತೆ ಒತ್ತಾಯಿಸಿ ಗರ್ಭಿಣಿ ಹೆಂಡತಿಗೆ ಗಂಡನಿಂದ ಹಲ್ಲೆ- ಗಂಡನ ವಿರುದ್ಧ ದೂರು ದಾಖಲಿಸಿದ...

ಕುಂದಾಪುರ: ವರದಕ್ಷಿಣೆ ತರುವಂತೆ ಒತ್ತಾಯಿಸಿ ಗರ್ಭಿಣಿ ಹೆಂಡತಿಗೆ ಗಂಡನಿಂದ ಹಲ್ಲೆ- ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ

spot_img
- Advertisement -
- Advertisement -

ಉಡುಪಿ: ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ಸಿಗರೇಟ್ ನಿಂದ ಸುಟ್ಟು ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕುಂದಾಪುರದ ಬೀಜಾಡಿ ನಿವಾಸಿ ಪ್ರಿಯಾಂಕ ಅವರಿಗೆ ( 21) ಆಕೆಯ ಪತಿ ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಎಂಬಾತ ನಿತ್ಯ ವರದಕ್ಷಿಣೆ ವಿಷಯವಾಗಿ ಚಿತ್ರ ಹಿಂಸೆ ನೀಡುತ್ತಿದ್ದು, ಸಿಗರೇಟ್ ನಿಂದ ಸುಟ್ಟು ತಾನೇ ಅದನ್ನು ವಿಡಿಯೋ ರೆಕಾರ್ಡ್ ಮಾಡಿ ಪ್ರಿಯಾಂಕಾ ಪೋಷಕರಿಗೆ ಕಳುಹಿಸಿ ವರದಕ್ಷಿಣೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ.

2 ಲಕ್ಷ ಹಣ 4 ಪವನ್ ಚಿನ್ನದ ಬೇಡಿಕೆ ಇಟ್ಟು ನಿತ್ಯ ಆಕೆಗೆ ಶೋಷಣೆ ಮಾಡುತ್ತಿದ್ದು ಪ್ರಿಯಾಂಕಾ ಗರ್ಭಿಣಿ ಎಂಬ ಕನಿಕರವೂ ಇಲ್ಲದೆ ಆಕೆಯ ಮೇಲೆ ಉರಿಯುತ್ತಿರುವ ಸಿಗರೇಟ್ ನಿಂದ ಸುಡುವ ದೃಶ್ಯ, ಪ್ರಿಯಾಂಕ ಕೈ ಮುಗಿದು ಬೇಡುವ ದೃಶ್ತ ಅಲ್ಲದೆ ಆಕೆಯ ಹೊಟ್ಟೆಗೆ ಒದೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಪ್ರಿಯಾಂಕಾ ತಪ್ಪಿಸಿಕೊಂಡ ಪರಿಣಾಮ ಪೆಟ್ಟು ಸೊಂಟಕ್ಕೆ ತಗುಲಿದೆ.

ಗಂಡನ ತಾಯಿಯೂ ಪ್ರಿಯಾಂಕ ಜೊತೆ ವಿಕೃತಿ ಮೆರೆಯದಂತೆ ಅಂಗಲಾಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಕೃತ ವರ್ತನೆಗೆ ಬೇಸತ್ತು ಪ್ರಿಯಾಂಕ ಈತನ ವಿರುದ್ಧ ದೂರು ದಾಖಲಿಸಿದ್ದು, ಆರೋಪಿ ಪ್ರದೀಪ್ ತಲೆಮರೆಸಿಕೊಂಡಿದ್ದಾನೆ.

- Advertisement -
spot_img

Latest News

error: Content is protected !!