Thursday, June 4, 2026
Homeತಾಜಾ ಸುದ್ದಿಟ್ರ್ಯಾಕ್ಟರ್‌ ಅಡಿಗೆ ಬಿದ್ದ ಗರ್ಭಿಣಿ ಹಾವು; 50 ಮರಿಗಳಿಗೆ ಜನ್ಮ ನೀಡಿ ಸಾವು

ಟ್ರ್ಯಾಕ್ಟರ್‌ ಅಡಿಗೆ ಬಿದ್ದ ಗರ್ಭಿಣಿ ಹಾವು; 50 ಮರಿಗಳಿಗೆ ಜನ್ಮ ನೀಡಿ ಸಾವು

- Advertisement -
- Advertisement -

ಚಿತ್ರದುರ್ಗ: ವಿಷಪೂರಿತ ಹಾವೊಂದು ಟ್ರ್ಯಾಕ್ಟರ್‌ಗೆ ಸಿಲುಕಿ 50 ಮರಿಗಳಿಗೆ ಜನ್ಮನೀಡಿ ಮೃತಪಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ತಾಲ್ಲೂಕಿನ ಭರಮಸಾಗರ ಹೋಬಳಿಯ ಹಂಪನೂರು ಗ್ರಾಮ ಇಂತಹದೊಂದು ವಿಸ್ಮಯಕ್ಕೆ ಕಾರಣವಾಗಿದೆ. ಮೃತ ಹಾವು ವೈಪರ್ ಜಾತಿಗೆ ಸೇರಿದ್ದು ಎನ್ನಲಾಗಿದೆ.


ರೈತರೊಬ್ಬರು ಭೂಮಿ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಗೆ ಸಿಲುಕಿ ಹಾವು ಮೃತಪಟ್ಟಿದೆ. ಇದರಿಂದ ಗಾಬರಿಗೊಂಡ ರೈತ ಹಾವನ್ನು ಪರಿಶೀಲಿಸಿದಾಗ ಹೊಟ್ಟೆ ಉಬ್ಬಿರುವುದು ಕಂಡುಬಂದಿದೆ. ಬಳಿಕ ಒಂದೊಂದೇ ಮರಿಗಳು ಹಾವಿನ ದೇಹದಿಂದ ಹೊರಗೆ ಬಂದಿವೆ. ಒಟ್ಟು 50 ಮರಿಗಳು ಹಾವಿನ ಹೊಟ್ಟೆಯೊಳಗೆ ಇದ್ದವು ಎಂದು ರೈತರು ತಿಳಿಸಿದ್ದಾರೆ.

- Advertisement -

Latest News

error: Content is protected !!