Friday, May 3, 2024
Homeಕರಾವಳಿಸುಳ್ಯ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಎನ್ಐಎ ಕೋರ್ಟ್ ಗೆ ಶರಣಾಗದ ಆರೋಪಿಗಳು

ಸುಳ್ಯ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಎನ್ಐಎ ಕೋರ್ಟ್ ಗೆ ಶರಣಾಗದ ಆರೋಪಿಗಳು

spot_img
- Advertisement -
- Advertisement -

ಸುಳ್ಯ : ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಪರಾರಿಯಾದ ಆರೋಪಿಗಳಿಗೆ ಶರಣಾಗಲು ಎನ್ಐಎ ಕೋರ್ಟ್ ಜೂನ್ 30 ರಂದು(ನಿನ್ನೆ) ಕೊನೆಯ ಡೆಡ್ ಲೈನ್ ನೀಡಲಾಗಿತ್ತು.ಆದ್ರೆ ಎನ್ಐಎ ನ್ಯಾಯಾಲಯಕ್ಕೆ ಯಾವ ಆರೋಪಿಗಳು ಕೂಡ ಹಾಜರಾಗಿಲ್ಲ ಎಂದು ಎನ್ಐಎ ಮೂಲಗಳಿಂದ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಮಾಹಿತಿ ದೊರಕಿದೆ.

ಪ್ರಮುಖ ಆರೋಪಿಗಳು ಶರಣಾಗಲು ಡೆಡ್ ಲೈನ್: ಉಮರ್ ಫಾರುಕ್, ಅಬುಬಕರ್ ಸಿದ್ದಿಕ್, ತುಫೈಲ್, ಮೊಹಮ್ಮದ್ ಮುಸ್ತಾಫಾ ಕೊಲೆ ಪ್ರಕರಣದಲ್ಲಿ ಎನ್​‌.ಐ.ಎಗೆ ಬೇಕಾಗಿರುವ ಮೋಸ್ಟ್​ ವಾಂಟೆಡ್​ ಆರೋಪಿಗಳಾಗಿದ್ದು. ಕೊಡಗಿನ ತುಫೈಲ್ ಎಮ್.ಹೆಚ್ ಈ ನಾಲ್ಕು ಜನ ಆರೋಪಿಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈ ನಾಲ್ಕು ಜನ ಆರೋಪಿಗಳ ಪತ್ತೆಗೆ ಒಟ್ಟು 14 ಲಕ್ಷ ಬಹುಮಾನ ಘೋಷಣೆ‌ ಮಾಡಲಾಗಿದೆ. ಈ ಪೈಕಿ ತುಫೈಲ್, ಮೊಹಮ್ಮದ್ ಮುಸ್ತಾಫಾ ಸುಳಿವಿಗೆ ತಲಾ 5 ಲಕ್ಷ, ಉಮರ್ ಫಾರುಕ್, ಅಬುಬಕರ್ ಸಿದ್ದಿಕ್ ಪತ್ತೆಗೆ ತಲಾ 2 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಇನ್ನೂ ಈ ಪ್ರಕರಣದಲ್ಲಿ ಒಟ್ಟು 8 ಜನ ಆರೋಪಿಗಳ ಬಂಧನಕ್ಕೆ ಬಾಕಿಯಿದ್ದು. ಈ ಎಲ್ಲಾ ಆರೋಪಿಗಳು ಕೋರ್ಟ್ ಗೆ ಶರಣಾಗತಿಯಾಗಲು ಜೂನ್ 30 ರಂದು ಡೆಡ್​ಲೈನ್ ನೀಡಲಾಗಿತ್ತು.

ಆರೋಪಿಗಳು ಒಂದು ವೇಳೆ ಎನ್.ಐ.ಎ ಕೋರ್ಟ್ ಗೆ ಹಾಜರಾಗದೆ ಇದ್ದಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿ ನ್ಯಾಯಾಲಯದ ಆದೇಶದ ಪ್ರತಿಗಳನ್ನು ಆರೋಪಿಗಳ ಮನೆ ಹಾಗೂ ಪ್ರಮುಖ ಸ್ಥಳಗಳಲ್ಲಿ ಹಚ್ಚಿದ್ದರು ಅದಲ್ಲದೆ ಮೈಕ್‌ ಮೂಲಕ ಆರೋಪಿಗಳ ಬಗ್ಗೆ ಎನ್ಐಎ ಅಧಿಕಾರಿಗಳು ಪ್ರಚಾರ ಮಾಡಿದ್ದರು. ಇದಕ್ಕೆ ಆರೋಪಿಗಳು ಕ್ಯಾರೆ ಮಾಡದೆ ತಲೆಮರೆಸಿಕೊಂಡಿದ್ದಾರೆ.

ವಿದೇಶಕ್ಕೆ ಪರಾರಿಯಾಗಿರುವ ಶಂಕೆ: ಮೋಸ್ಟ್ ವಾಂಟೆಡ್ ಆರೋಪಿಗಳು ಎನ್ಐಎ ಅಧಿಕಾರಿಗಳ ತನಿಖೆಯ ಪ್ರಕಾರ ವಿದೇಶಕ್ಕೆ ಪರಾರಿಯಾಗಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದು. ಆರೋಪಿಗಳ ಬಗ್ಗೆ ಎನ್ಐಎ ಅಧಿಕಾರಿಗಳು ‘ರಾ’ ಎಜೆಸ್ಸಿ ಯನ್ನು ಸಂಪರ್ಕಿಸಿ ಪ್ರಕರಣದ ದಾಖಲೆಗಳನ್ನು ನೀಡಿದ್ದು ಈ ಮೂಲಕ ರಾ ಏಜೆನ್ಸಿ ವಿದೇಶದಲ್ಲಿ ಅಡಗಿರುವ ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ

ಹತ್ಯೆಗಳ ಉದ್ದೇಶ ಬಹಿರಂಗ:

2022 ರ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ PFI ‘ಕಿಲ್ಲರ್ ಸ್ಕ್ವಾಡ್ಸ್’ ಅಥವಾ ‘ಸೇವಾ ತಂಡಗಳು’ ನೆಟ್ಟಾರುವನ್ನು ಕಡಿದು ಹತ್ಯೆ ಮಾಡಲಾಗಿತ್ತು. 2047 ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ತನ್ನ ಅಂತಿಮ ಉದ್ದೇಶದೊಂದಿಗೆ ಕೋಮುವಾದದ ಬೆನ್ನು ಹತ್ತುವ ಮತ್ತು ಕೋಮು ದ್ವೇಷವನ್ನು ಹರಡುವ ಗುರಿಯೊಂದಿಗೆ PFI ಇಂತಹ ಉದ್ದೇಶಿತ ‘ದ್ವೇಷದ ಹತ್ಯೆಗಳಲ್ಲಿ’ ತೊಡಗಿಸಿಕೊಂಡಿದ್ದರು ಎಂದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

- Advertisement -
spot_img

Latest News

error: Content is protected !!