Friday, June 5, 2026
Homeಕರಾವಳಿಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಮಡಿಕೇರಿಯಲ್ಲಿ ಆರೋಪಿ ತುಫೈಲ್‌ಗೆ ತೀವ್ರ ಹುಡುಕಾಟ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ: ಮಡಿಕೇರಿಯಲ್ಲಿ ಆರೋಪಿ ತುಫೈಲ್‌ಗೆ ತೀವ್ರ ಹುಡುಕಾಟ

- Advertisement -
- Advertisement -

ಮಡಿಕೇರಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಹತ್ಯೆಯ ಪ್ರಮುಖ ಆರೋಪಿಗಳಲ್ಲೊಬ್ಬನಾದ ತುಫೈಲ್ ಗಾಗಿ ಎನ್‍ಐಎ ಮಡಿಕೇರಿಯಲ್ಲಿ ತೀವ್ರ ಹುಡುಕಾಟ ಆರಂಭಿಸಿದೆ.

ತುಫೈಲ್ ಮೂಲತಃ ಕೊಡಗು ಜಿಲ್ಲೆ ಮಡಿಕೇರಿಯ ಗದ್ದಿಗೆಯ ನಿವಾಸಿ.ಈತ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳಿಗೆ ಸಹಕಾರವನ್ನು ನೀಡಿದ್ದ ಎಂಬ ಆರೋಪದ ಅಡಿಯಲ್ಲಿ ಈತನನ್ನೂ ಕೂಡ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳು ಸುಳ್ಯದ ಬೆಳ್ಳಾರೆಯಲ್ಲಿ ಹತ್ಯೆ ನಡೆಸಿ ಪರಾರಿಯಾದ ಆರೋಪಿಗಳಿಗೆ ಈತ ಉಳಿದುಕೊಳ್ಳಲು ವಸತಿ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಅದಲ್ಲದೇ ಈತ ನಿಷೇಧಿತ PFI ಸಂಘಟನೆಯಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ. ಈ ಹಿಂದೆ ತುಫೈಲ್‍ನನ್ನು ಹುಡುಕಿಕೊಂಡು ಎನ್‍ಐಎ ತಂಡ ಸೆಪ್ಟೆಂಬರ್‌ನಲ್ಲಿ ಎರಡು ಭಾರಿ ಕೊಡಗಿಗೆ ಬಂದಿತ್ತು. 

- Advertisement -

Latest News

error: Content is protected !!