Sunday, June 28, 2026
Homeತಾಜಾ ಸುದ್ದಿಸಂಜನಾ ಆಪ್ತ ರಾಹುಲ್ ಜೊತೆಗೆ ಪ್ರಶಾಂತ್ ಸಂಬರಗಿ ಇರೋ ಫೋಟೋ ವೈರಲ್

ಸಂಜನಾ ಆಪ್ತ ರಾಹುಲ್ ಜೊತೆಗೆ ಪ್ರಶಾಂತ್ ಸಂಬರಗಿ ಇರೋ ಫೋಟೋ ವೈರಲ್

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ಬಗ್ಗೆ ದಿನಕ್ಕೊಂದು ಹೊಸ ಬಾಂಬ್ ಸಿಡಿಸುತ್ತಿದ್ದಂತ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಇದೀಗ ನಟಿ ಸಂಜನಾ ಆಪ್ತ ರಾಹುಲ್ ಜೊತೆ ಕಾಣಿಸಿಕೊಂಡಿರುವ ಪೋಟೋ ಒಂದು ರಿವೀಲ್ ಆಗಿದೆ. ಈ ಮೂಲಕ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಬಗ್ಗೆಯೂ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸ್ಯಾಂಡಲ್ ವುಡ್ ಮಾದಕ ದ್ರವ್ಯ ಪ್ರಕರಣದಲ್ಲಿ ನಟಿ ರಾಗಿಣಿ, ಅವರ ಆಪ್ತ ರವಿಶಂಕರ್, ನಟಿ ಸಂಜನಾ ಆಪ್ತ ರಾಹುಲ್ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರ ಮಧ್ಯೆ ನಟಿ ಸಂಜನಾ ಗಲ್ರಾನಿಯವರನ್ನು ಕೂಡ ಯಾವುದೇ ಕ್ಷಣದಲ್ಲಾದರೂ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ಇದರ ಮಧ್ಯೆ ನಟಿ ಸಂಜನಾ ಗಲ್ರಾನಿಯವರ ಆಪ್ತ, ಸಿಸಿಬಿ ಬಂಧನದಲ್ಲಿರುವಂತ ರಾಹುಲ್ ಜೊತೆಗೆ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಇರುವಂತ ಪೋಟೋ ಒಂದು ರಿವೀಲ್ ಆಗಿದೆ. ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆಯ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ್ದಂತ ಪ್ರಶಾಂತ್ ಸಂಬರ್ಗಿಯವರೂ ಇದೀಗ ಸಿಸಿಬಿ ವಶದಲ್ಲಿರುವ ರಾಹುಲ್ ಜೊತೆ ಕಾಣಿಸಿಕೊಂಡಿರುವ ಪೋಟೋದಿಂದ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ. ಈ ನಿಟ್ಟಿನಲ್ಲಿಯೂ ಸಿಸಿಬಿ ಪೊಲೀಸರು ವಿಚಾರಣೆ ನಡೆಸಲಿದ್ದಾರಾ ಎನ್ನುವ ಬಗ್ಗೆ ಕಾದು ನೋಡಬೇಕಿದೆ.

- Advertisement -

Latest News

error: Content is protected !!