Friday, May 10, 2024
Homeಕರಾವಳಿವಿವಾಹಿತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬ್ಲ್ಯಾಕ್ ಮೇಲ್ ; ಸುಬ್ರಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ...

ವಿವಾಹಿತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬ್ಲ್ಯಾಕ್ ಮೇಲ್ ; ಸುಬ್ರಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಅರೆಸ್ಟ್

spot_img
- Advertisement -
- Advertisement -

ಸುಬ್ರಮಣ್ಯ; ವಿವಾಹಿತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬ್ಲ್ಯಾಕ್ ಮೇಲ್  ಮಾಡಿದ  ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಬ್ರಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಅವರನ್ನು ಅರೆಸ್ಟ್ ಮಾಡಲಾಗಿದೆ. ಪುತ್ತೂರಿನ ಆರ್ಲಪದವು ಮೂಲದ ಪ್ರಶಾಂತ ಭಟ್ ಮಾಣಿಲ ಬಂಧಿತ ಆರೋಪಿ.

ಆರೋಪಿಗೆ 2020 ರಲ್ಲಿ ಕ್ಲಬ್ ಹೌಸ್ ಆ್ಯಪ್ ಮೂಲಕ ಮಹಿಳೆಯ ಪರಿಚಯವಾಗಿದೆ. ದೂರು ನೀಡಿದ ಮಹಿಳೆಯು ಸಂಗೀತದಲ್ಲಿ ಆಸಕ್ತಿ ಇದ್ದು ಕ್ಲಬ್ ಹೌಸ್ ಆ್ಯಪ್‌ನಲ್ಲಿ ಹಾಡುತ್ತಿದ್ದಳು.ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಕ್ರಮೇಣ ಪರಸ್ಪರ ಇಷ್ಟಪಟ್ಟಿದ್ದಾರೆ.2023ರ ಜನವರಿ ತಿಂಗಳಲ್ಲಿ ಆರೋಪಿಯು ಮಹಿಳೆಯನ್ನು ಭೇಟಿಯಾಗಲು ಬಂದು ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದಾನೆ.

ಈ ವೇಳೆ ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಜತೆಗೆ ವಿಡಿಯೋ ಕಾಲ್ ಮಾಡಿ ಅಲ್ಲಿಯೂ ನಗ್ನ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ ಎಂದು ದೂರಲಾಗಿದೆ.ಅಲ್ಲಿ ಮಹಿಳೆಯ ಮೇಲೆ ಆರೋಪಿಯು ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಲ್ಲದೇ ಅದೇ ಲಾಡ್ಜಿನಲ್ಲಿ ಘಟನೆಯು ಮತ್ತೊಮ್ಮೆ ನಡೆದಿದೆ ಎಂದು ಮಹಿಳೆಯು ದೂರಿನಲ್ಲಿ ದಾಖಲಿಸಿದ್ದಾರೆ.ಈ ವೇಳೆ ಆರೋಪಿಯು ಆರೋಪಿಯು ಮಹಿಳೆಯಿಂದ ಹಣಕ್ಕೂ ಬೇಡಿಕೆ ಇಟ್ಟಿದ್ದು, ಮಹಿಳೆಯು ಒಮ್ಮೆ 25 ಸಾವಿರ ಹಣ ನೀಡಿದ್ದಾಳೆ. ಬಳಿಕ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಸಿ 7 ಲಕ್ಷ ರೂ.ಗೆ ಗಳಿಗೆ ಬೇಡಿಕೆ ಇಟ್ಟಿದ್ದ. ಅಲ್ಲದೇ, ಮಹಿಳೆಯ ತಾಯಿ ಹಾಗೂ ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದ. ಮಹಿಳೆ ಹಾಗೂ ಆಕೆಯ ಪತಿಯ ದೂರಿನ ಹಿನ್ನೆಲೆ ಕಾರವಾರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.

- Advertisement -
spot_img

Latest News

error: Content is protected !!