Monday, May 6, 2024
Homeಕ್ರೀಡೆಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ; ಬ್ಯಾಡ್ಮಿಂಟನ್‌ ನಲ್ಲಿ ಪ್ರಮೋದ್ ಭಗತ್‌ಗೆ ಚಿನ್ನ, ಮನೋಜ್‌ಗೆ ಕಂಚು!

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ; ಬ್ಯಾಡ್ಮಿಂಟನ್‌ ನಲ್ಲಿ ಪ್ರಮೋದ್ ಭಗತ್‌ಗೆ ಚಿನ್ನ, ಮನೋಜ್‌ಗೆ ಕಂಚು!

spot_img
- Advertisement -
- Advertisement -

ಟೋಕಿಯೋ: ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಡುವಲ್ಲಿ ಪ್ರಮೋದ್ ಭಗತ್ ಯಶಸ್ವಿಯಾದರೆ, ಮನೋಜ್‌ ಸರ್ಕಾರ್‌ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮೋದ್ ಭಗತ್ ಹಾಗೂ ಮನೋಜ್‌ ಸರ್ಕಾರ್‌ ತಲಾ 2-0 ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಇದರೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಪ್ರಮೋದ್‌ ಭಗತ್ 21-14, 21-17 ಅಂಕಗಳಿಂದ ಗ್ರೇಟ್‌ ಬ್ರಿಟನ್‌ನ ಡೇನಿಯಲ್ ಬೆಥನಿಲ್‌ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ ಭಾರತಕ್ಕೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 4ನೇ ಚಿನ್ನದ ಪದಕ ಲಭಿಸಿದಂತಾಗಿದೆ.ಅದೇ ಸಮಯದಲ್ಲಿ, ಈ ಸ್ಪರ್ಧೆಯಲ್ಲಿ ಭಾರತದ ಮನೋಜ್ ಸರ್ಕಾರ್ ಕಂಚಿನ ಪದಕಕ್ಕೆ ಮುತ್ತಿಟ್ಟರು

- Advertisement -
spot_img

Latest News

error: Content is protected !!