Thursday, June 25, 2026
Homeತಾಜಾ ಸುದ್ದಿಇಂದು ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಪ್ರಜ್ವಲ್ ರೇವಣ್ಣ ; ಈಗಾಗಲೇ ಜರ್ಮನಿಯ ಮ್ಯೂನಿಚ್ ಏರ್ ಪೋರ್ಟ್...

ಇಂದು ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಪ್ರಜ್ವಲ್ ರೇವಣ್ಣ ; ಈಗಾಗಲೇ ಜರ್ಮನಿಯ ಮ್ಯೂನಿಚ್ ಏರ್ ಪೋರ್ಟ್ ನಲ್ಲಿ ಚೆಕ್ ಇನ್ ಆದ ಹಾಸನ ಸಂಸದ

- Advertisement -
- Advertisement -

ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ.  ಪ್ರಜ್ವಲ್ ರೇವಣ್ಣ ಈಗಾಗಲೇ ಜರ್ಮನಿಯ ಮ್ಯೂನಿಚ್ ಏರ್ ಪೋರ್ಟ್ ನಲ್ಲಿ ಚೆಕ್ ಇನ್ ಆಗಿದ್ದಾರೆ.

ಮೊನ್ನೆ ವೀಡಿಯೋ ಮೂಲಕ ಮೇ.31 ರಂದು ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾಗೋದಾಗಿ ಹೇಳಿದ್ದರು.ಆದರೆ ಅವರು ಬರ್ತಾರಾ ಅನ್ನೋ ಬಗ್ಗೆ ಎಲ್ಲರಲ್ಲೂ ಡೌಟ್ ಇತ್ತು. ಆದ್ರೀಗ ಅವರು ಬರೋದು ಪಕ್ಕಾ ಆಗಿದೆ.

 ಇಂದೇ ಬೆಂಗಳೂರಿಗೆ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದು, ಈಗಾಗಲೇ ಜರ್ಮನಿಯ ಮ್ಯೂನಿಚ್ ಏರ್ ಪೋರ್ಟ್ ಗೆ ಆಗಮಿಸಿದ್ದಾರೆ. ಅಲ್ಲಿ ಅವರು ಲಗೇಜ್ ಚೆಕ್ ಇನ್ ಮಾಡಿರೋದಾಗಿ ತಿಳಿದು ಬಂದಿದೆ. 2 ಟ್ರಾಲಿ ಬ್ಯಾಗ್ ಸಮೇತ ಮ್ಯೂನಿಜ್ ಏರ್ ಪೋರ್ಟ್ ಗೆ ಸಂಸದ ಪ್ರಜ್ವಲ್ ರೇವಣ್ಣ ಬಂದಿದ್ದಾರೆ.

ಜರ್ಮನಿಯ ಮ್ಯೂನಿಚ್ ನಿಂದ ಲುಫ್ತಾ ಏರ್ ಲೈನ್ಸ್ ವಿಮಾನದ ಮೂಲಕ ಬೆಂಗಳೂರಿಗೆ ಇಂದೇ ಸಂಸದ ಪ್ರಜ್ವಲ್ ರೇವಣ್ಣ ಆಗಮಿಸಲಿದ್ದಾರೆ. ಅವರನ್ನು ಎಸ್‌ಐಟಿ ಪೊಲೀಸರು ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಏರ್ ಪೋರ್ಟ್ ನಲ್ಲೇ ಬಂದಿಸೋ ಸಾಧ್ಯತೆ ಇದೆ.

ಸಂಸದ ಪ್ರಜ್ವಲ್ ರೇವಣ್ಣ ಅವರು, ನಿರೀಕ್ಷಣಾ ಜಾಮೀನು ಕೋರಿ ವಿದೇಶದಿಂದಲೇ ನಿನ್ನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಾಳೆ ನಡೆಸಲಿದೆ.

- Advertisement -

Latest News

error: Content is protected !!