- Advertisement -
![]()
- Advertisement -
ಮುಂಬಯಿಯ ಪೊವಾಯಿ ಅಯ್ಯಪ್ಪ ಭಕ್ತ ವೃಂದದಿಂದ 23ನೇ ಶ್ರೀ ಅಯ್ಯಪ್ಪ ವಾರ್ಷಿಕ ಮಹಾ ಪೂಜೆಯು 2026 ಜನವರಿ 04 ರವಿವಾರದಂದು ಓಂ ಶಾಂತಿ ಕಾಂಪ್ಲೆಕ್ಸ್ ನಡೆಯಲಿದೆ.
ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಗಣಹೋಮ, 9.30 ರಿಂದ 12.30ರವರೆಗೆ ಭಜನಾ ಸಂಕೀರ್ತನ, 12.30 ರಿಂದ ಮಹಾಪೂಜೆ , ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಟನಾ ನೃತ್ಯ ಅಕಾಡೆಮಿ ಪೊವಾಯಿ ಮತ್ತು ಸ್ಥಳೀಯ ಮಕ್ಕಳಿಂದ ವಿವಿಧ ನೃತ್ಯ ಕಾರ್ಯಕ್ರಮ. ಸಂಜೆ 5 ರಿಂದ ಶಿಬರೂರು ಸುರೇಶ ಎಲ್. ಶೆಟ್ಟಿ, ಶ್ರೀ ಮಹಾವಿಷ್ಣು ಭಜನಾ ತಂಡ, ಬಂಟರ ಸಂಘ ಕುರ್ಲಾ ಇವರಿಂದ ಭಕ್ತಿ ಗಾನಸುದ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ರಿಂದ ಮಹಾ ಮಂಗಳಾರತಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರಾಮು ಅಮೀನ್ 9821544467 ಅವರನ್ನು ಸಂಪರ್ಕಿಸಬಹುದು
- Advertisement -


