Thursday, June 25, 2026
Homeಕರಾವಳಿಪುತ್ತೂರು; ಫೇಸ್ ಬುಕ್ ನಲ್ಲಿ ಪರಿಚಯವಾದ ಅಪ್ರಾಪ್ತೆ ಅತ್ಯಾಚಾರ ಆರೋಪ; ಮಹಿಳಾ ಠಾಣೆಯಲ್ಲಿ‌ ಕೇಸು ದಾಖಲು

ಪುತ್ತೂರು; ಫೇಸ್ ಬುಕ್ ನಲ್ಲಿ ಪರಿಚಯವಾದ ಅಪ್ರಾಪ್ತೆ ಅತ್ಯಾಚಾರ ಆರೋಪ; ಮಹಿಳಾ ಠಾಣೆಯಲ್ಲಿ‌ ಕೇಸು ದಾಖಲು

- Advertisement -
- Advertisement -

ಪುತ್ತೂರು;ಯುವಕನೊಬ್ಬ ಫೇಸ್ಬುಕ್ ನಲ್ಲಿ ಪರಿಚಯವಾದ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ ಬಗ್ಗೆ ಪುತ್ತೂರು‌ ಮಹಿಳಾ ಠಾಣೆಯಲ್ಲಿ‌ ಕೇಸ್ ದಾಖಲಾಗಿದೆ.ಕೆಯ್ಯೂರು ಮಾಡಾವು ನಿವಾಸಿ ನವೀನ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ನವೀನ್, ಕಾಸರಗೋಡು ಮೂಲದ ಅಪ್ರಾಪ್ತ ಬಾಲಕಿಯನ್ನು ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡಿದ್ದು ಪುತ್ತೂರು ಜಾತ್ರೆಯ ವೇಳೆ ಆಕೆಯನ್ನು ಪುಸಲಾಯಿಸಿ ಮಾಡಾವು ಅಂಗನವಾಡಿ ಕೇಂದ್ರದ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಈ ಕುರಿತು ಬಾಲಕಿ ಪುತ್ತೂರು ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!