Tuesday, May 21, 2024
Homeಕರಾವಳಿಬೆಳ್ತಂಗಡಿ: ವಿಕಲಚೇತನ ದಲಿತ ಯುವಕನ ಮೇಲೆ ಪೋಲಿಸ್ ವಾಹನದ ಸಿಬ್ಬಂದಿಗಳಿಂದ ಏಕಾಏಕಿ ಹಲ್ಲೆ !

ಬೆಳ್ತಂಗಡಿ: ವಿಕಲಚೇತನ ದಲಿತ ಯುವಕನ ಮೇಲೆ ಪೋಲಿಸ್ ವಾಹನದ ಸಿಬ್ಬಂದಿಗಳಿಂದ ಏಕಾಏಕಿ ಹಲ್ಲೆ !

spot_img
- Advertisement -
- Advertisement -

ಬೆಳ್ತಂಗಡಿ : ನಲಿಕೆ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಸಮಿತಿ ವಿಕಲಚೇತನ ದಲಿತ ಯುವಕನ ಮೇಲೆ ತುರ್ತು ಪೋಲಿಸ್ ವಾಹನದ ಸಿಬ್ಬಂದಿಗಳು ಏಕಾಏಕಿ ಹಲ್ಲೆ ನಡೆಸಿ, ದೌರ್ಜನ್ಯ ನಡೆಸಿದ್ದನ್ನು ಉಗ್ರವಾಗಿ ಖಂಡಿಸಿದೆ.

ಪೋಲಿಸರು ಶಿಶಿಲ ಗ್ರಾಮದ ಗಿರೀಶ್ ಎಂಬಾತನ ಮೇಲೆ ದೌರ್ಜನ್ಯ ಮಾಡಿರುವುದು ಸರಿಯಲ್ಲ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಎಸ್ ಶಾಂತಿಕೋಡಿ ಆರೋಪಿಸಿದ್ದಾರೆ.

ಜಮೀನಿನ ವ್ಯಾಜ್ಯಕ್ಕೆ ಕುರಿತು ಪೋಲಿಸ್ ಹಿಂಸೆ ಅನಾಗರಿಕತೆಯ ಸಂಕೇತ ಎಂದರು. ಒಬ್ಬ ವಿಕಲಚೇತನ ದಲಿತ ಯುವಕನ ಮೇಲಿನ ದೌರ್ಜನ್ಯವನ್ನು ಸಹಿಸಲು ಸಾಧ್ಯವೇ ಇಲ್ಲ. ಆರೋಪಿತ ಪೋಲಿಸರ ಮೇಲೆ ಕ್ರಿಮಿನಲ್ ಕೇಸ್ ಹಾಕಿ, ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು, ಇಲ್ಲವಾದಲ್ಲಿ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಧರ್ಮಸ್ಥಳ ಪೋಲಿಸ್ ಠಾಣೆ ಚಲೋ ಎಂಬ ಉಗ್ರ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರ ನೀಡಿದ್ದಾರೆ.

ದಸಂಸ ( ಅಂಬೇಡ್ಕರ್ ವಾದ ) ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್, ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಗೋಡು, ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ ವಸಂತ,ಮಾಜಿ ಅಧ್ಯಕ್ಷ ಸೇಸಪ್ಪ ಅಳದಂಗಡಿ , ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಲಾಯಿಲ, ದಲಿತ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಸೇರಿದಂತೆ ಹಲವಾರು ದಲಿತ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದರು .

- Advertisement -
spot_img

Latest News

error: Content is protected !!