Saturday, June 22, 2024
Homeಕರಾವಳಿಮಂಗಳೂರುಬೆಳ್ತಂಗಡಿ : ಹರೀಶ್ ಪೂಂಜರಿಗೆ ಪೊಲೀಸರಿಂದ  ನೋಟಿಸ್ ; ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ...

ಬೆಳ್ತಂಗಡಿ : ಹರೀಶ್ ಪೂಂಜರಿಗೆ ಪೊಲೀಸರಿಂದ  ನೋಟಿಸ್ ; ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ನೋಟಿಸ್ ಪ್ರತಿ ಲಭ್ಯ

spot_img
- Advertisement -
- Advertisement -

ಬೆಳ್ತಂಗಡಿ; ಎರಡು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರತ್ಯೇಕ ಎರಡು ಎಫ್ ಐ ಆರ್ ದಾಖಲಾದ ಹಿನ್ನೆಲೆ ಇಂದು ಪೋಲೀಸರು ಬೆಳ್ತಂಗಡಿಯ ಗರ್ಡಾಡಿಯಲ್ಲಿರುವ ಹರೀಶ್ ಪೂಂಜ ನಿವಾಸಕ್ಕೆ ಆಗಮಿಸಿದ್ದರು.

ಈ ವೇಳೆ ಪೊಲೀಸರು ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಆ ಪ್ರತಿ ಮಹಾ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣಾ ಅ. ಕ 58/2024 ಕಲಂ: 143,147,341,504,506 ಜೊತೆಗೆ 149 ಐಪಿಸಿ ಪ್ರಕರಣದಲ್ಲಿ ಈ ಕೆಳಗೆ ಹೆಸರು ವಿಳಾಸ ನಮೂದಿಸಿದ ನೀವು ಆರೋಪಿದಾರರಾಗಿರುತ್ತೀರಿ. ಬೆಳ್ತಂಗಡಿ ಪೊಲೀಸು ಠಾಣಾ ಪೊಲೀಸು ನಿರೀಕ್ಷಕ ಹಾಗೂ ತನಿಖಾಧಿಕಾರಿಯಾದ ಬಿ. ಜಿ. ಸುಬ್ಬಾಪೂರ ಮರ್ ಆದ ನಾನು ಸದರಿ ಪ್ರಕರಣದಲ್ಲಿ ನಿಮ್ಮನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಾಧಾರ ಹಾಗೂ ಸನ್ನಿವೇಷಗಳು ಕಂಡು ಬಂದಿದ್ದು, ಈ ನೋಟೀಸು ಸ್ವೀಕರಿಸಿದ ಕೂಡಲೇ ಯಾವುದೇ ವಿಳಂಬವಿಲ್ಲದೇ ಪೊಲೀಸ್ ಬರಲು ಹಾಗೂ ಸಹಕರಿಸಲು ತಿಳಿಯಪಡಿಸಲಾಗಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

- Advertisement -
spot_img

Latest News

error: Content is protected !!