Friday, June 26, 2026
Homeಕರಾವಳಿಎಡಪದವು: ಬಸ್ ಸ್ಟಾಂಡ್ ಗೆ ನುಗ್ಗಿದ ಪೊಲೀಸ್ ಜೀಪ್- ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್...

ಎಡಪದವು: ಬಸ್ ಸ್ಟಾಂಡ್ ಗೆ ನುಗ್ಗಿದ ಪೊಲೀಸ್ ಜೀಪ್- ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗೆ ಗಾಯ…!

- Advertisement -
- Advertisement -

ಎಡಪದವು: ಮಂಗಳೂರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರೇವತಿ ಅವರಿದ್ದ ಪೊಲೀಸ್ ಜೀಪ್ ಒಂದು ಎಡಪದವು ವಿವೇಕಾನಂದ ಜೂನಿಯರ್ ಕಾಲೇಜು ಮುಂಭಾಗದಲ್ಲಿರುವ ಬಸ್ ಸ್ಟಾಂಡ್ ಗೆ ನುಗ್ಗಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಅಪಘಾತದಲ್ಲಿ ಇನ್ಸ್ಪೆಕ್ಟರ್ ರೇವತಿ ಅವರ ಕೈಗೆ ಗಾಯವಾಗಿದೆ. ಘಟನೆ ನಡೆಯುತ್ತಿದ್ದಂತೆ ಧಾವಿಸಿ ಬಂದ ಎಡಪದವು ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ ಮತ್ತು ಸ್ಥಳೀಯರು ರೇವತಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಪಘಾತದಲ್ಲಿ ಪೊಲೀಸ್ ಜೀಪ್ ಜಖಂಗೊಂಡಿದ್ದು ಬಸ್ ಸ್ಟಾಂಡ್ ಪುಡಿ ಪುಡಿಯಾಗಿದೆ.

- Advertisement -

Latest News

error: Content is protected !!