Saturday, May 11, 2024
Homeಕರಾವಳಿಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ ಗಳ ವರ್ಗಾವಣೆ

ಮಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್ ಗಳ ವರ್ಗಾವಣೆ

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ 177 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ‌ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ‌. ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೆ ರಾಜ್ಯ ಗುಪ್ತ ವಾರ್ತೆಯಲ್ಲಿದ್ದ ಮಂಜುನಾಥ ಎಂ. ವರ್ಗಾವಣೆಯಾಗಿದ್ದಾರೆ. ಮಂಗಳೂರು ನಗರ ಸಿಸಿಆರ್ ಬಿ ಯಲ್ಲಿದ್ದ ಸಿದ್ದಗೌಡ ಹೆಚ್. ಭಜಂತ್ರಿ ಕಂಕನಾಡಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ವೃತ್ತದಲ್ಲಿದ್ದ ರಮೇಶ್ ಹೆಚ್. ಹನಾಪುರ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿದ್ದ ಅಶೋಕ್ ಪಿ. ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಗೆ, ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿದ್ದ ಗುರುದತ್ ಕಾಮತ್ ಮಂಗಳೂರು ‌ನಗರ ಸಿಸಿಆರ್ ಬಿ ಗೆ ವರ್ಗಾವಣೆಯಾಗಿದ್ದಾರೆ.

ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿದ್ದ ಲೋಕೇಶ್ ಎ.ಸಿ. ಮಂಗಳೂರು ‌ನಗರ ಮಹಿಳಾ ಠಾಣೆಗೆ, ಮಂಗಳೂರು ಡಿಸಿಆರ್ ಇ ನಲ್ಲಿದ್ದ ವಿನಾಯಕ ಬಿಲ್ಲವ ಎಸಿಬಿಗೆ ವರ್ಗಾವಣೆಗೊಂಡಿದ್ದಾರೆ.

ಮಂಗಳೂರು ನಗರ .ಮಹಿಳಾ ಪೊಲೀಸ್ ಠಾಣೆಯಲ್ಲಿದ್ದ ರೇವತಿ ಎನ್. ಸಿ.ಎಸ್.ಪಿ ಗೆ, ಮೈಸೂರು ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿದ್ದ ಜೀವನ್ ಕೆ. ಮಂಗಳೂರು ಡಿಸಿಆರ್ ಇ ಗೆ ವರ್ಗಾವಣೆಯಾಗಿದ್ದಾರೆ.

- Advertisement -
spot_img

Latest News

error: Content is protected !!