Friday, June 5, 2026
Homeಕರಾವಳಿಮಹಿಳೆ ನಾಪತ್ತೆ ಪ್ರಕರಣವನ್ನು ಭೇದಿಸಿದ ಬೆಳ್ತಂಗಡಿ ಪೊಲೀಸರು

ಮಹಿಳೆ ನಾಪತ್ತೆ ಪ್ರಕರಣವನ್ನು ಭೇದಿಸಿದ ಬೆಳ್ತಂಗಡಿ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಕೆಲಸಕ್ಕೆಂದು ಬೇರೆ ರಾಜ್ಯದಿಂದ ಬಂದು ನಾಪತ್ತೆಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ  ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಬಳಿಯ ಕಟ್ಟಡ ಕೆಲಸಕ್ಕೆ ಕೋಲ್ಕತ್ತಾ ಮೂಲದ ದಂಪತಿ ಮುಷರಫ್ ಮತ್ತು ರೀಮಾ(24) ಬಂದಿದ್ದು. ಪತ್ನಿ ರೀಮಾ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಜು.8 ರಂದು ಹೋಗಿದ್ದು ಬಳಿಕ ವಾಪಸ್ ಬರದೆ ಬಂದಿರಲಿಲ್ಲ. ಈ ಬಗ್ಗೆ ಗಂಡ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜು.8 ರಂದು ನಾಪತ್ತೆ ದೂರು ದಾಖಲಿಸಿದ್ದರು.

ನಾಪತ್ತೆ ಪ್ರಕರಣ ಜಾಡು ಹಿಡಿದ ಬೆಳ್ತಂಗಡಿ ಪೊಲೀಸರು ಟೆಕ್ನಿಕಲ್ ಮಾಹಿತಿ ಆಧಾರದಲ್ಲಿ ಜು.17 ರಂದು ಬಂಟ್ವಾಳದ ಬಸ್ ನಿಲ್ದಾಣದಲ್ಲಿ ಪತ್ತೆ ಮಾಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆತಂದು ಗಂಡ ಜೊತೆ ಕಳುಹಿಸಿಕೊಟ್ಟು ಪ್ರಕರಣ ಸುಖಾಂತ್ಯ ಮಾಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಬ್ಬಾಪೂರ್ ಮಠ್ ಮತ್ತು ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ,ಸಬ್ ಇನ್ಸ್ಪೆಕ್ಟರ್ ಮುರುಳಿಧರ್ ನಾಯ್ಕ್ ನೇತೃತ್ವದ ಸಿಬ್ಬಂದಿ ಚರಣ್ ರಾಜ್ , ಬಸವರಾಜ್ , ಬೆನ್ನಿಚ್ಚನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -

Latest News

error: Content is protected !!