Sunday, June 28, 2026
Homeಕರಾವಳಿಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಕೊಡಗಿನ ಹೋಮ್ ಸ್ಟೇ ಯಲ್ಲಿ ಪೊಲೀಸರ ಪರಿಶೀಲನೆ

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ; ಕೊಡಗಿನ ಹೋಮ್ ಸ್ಟೇ ಯಲ್ಲಿ ಪೊಲೀಸರ ಪರಿಶೀಲನೆ

- Advertisement -
- Advertisement -

ಮಡಿಕೇರಿ: ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಹೋಮ್ ಸ್ಟೇ ಒಂದರಲ್ಲಿ ಮಂಗಳೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ಸಮೀಪದ‌ ನೆಮ್ಮಲೆ ಗ್ರಾಮದ ಓಟೆಕಾಡ್ ಎಂಬ ಹೋಮ್ ಸ್ಟೇಯಲ್ಲಿ ಪರಿಶೀಲನೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟ ಆರೋಪಿಗಳು ಹೋಮ್ ಸ್ಟೇಯಲ್ಲಿ ತಂಗಿದ್ದ ಶಂಕೆಯ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಹೋಮ್ ಸ್ಟೇ ಮಾಲೀಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!