Wednesday, June 3, 2026
Homeಕರಾವಳಿಮಂಗಳೂರು; ಶ್ವಾನ ದಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಶ್ವಾನ  ಸಾವು

ಮಂಗಳೂರು; ಶ್ವಾನ ದಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಶ್ವಾನ  ಸಾವು

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಶ್ವಾನ ದಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಶ್ವಾನವೊಂದು ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಮೃತಪಟ್ಟಿದೆ. 7 ವರ್ಷ 10 ತಿಂಗಳು ವಯಸ್ಸಿನ ಜ್ವಾಲಾ ಮೃತಪಟ್ಟ ಶ್ವಾನ.

ಡಾಬರ್‌ಮನ್ ಪಿಂಚರ್ ತಳಿಗೆ ಸೇರಿದ ಜ್ವಾಲಾ ದಕ್ಷಿಣ ಕನ್ನಡ ಜಿಲ್ಲಾ ಶ್ವಾನ ದಳದಲ್ಲಿ ಅಪರಾಧ ಪ್ರಕರಣಗಳ ಪತ್ತೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಸಹಾಯ ಮಾಡುತ್ತಿದ್ದಳು. ಕಳೆದ ಕೆಲವು ಸಮಯಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಜ್ವಾಲಾ ನಿನ್ನೆ ಬೆಳಗ್ಗೆ ಸಾವನ್ನಪ್ಪಿದೆ.

ಮೃತ ಶ್ವಾನಕ್ಕೆ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜ್ವಾಲಾಳನ್ನು ಸಿಬ್ಬಂದಿ ಕುಮಾರ ಕತ್ಲೇರ ನಿರ್ವಹಿಸುತ್ತಿದ್ದರು.

- Advertisement -

Latest News

error: Content is protected !!