- Advertisement -
- Advertisement -
ಮಂಗಳೂರು: ಖಾಸಗಿ ಚಾನೆಲ್ ಒಂದರ ಕಾರ್ಯಕ್ರಮವೊಂದರಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ಮಾಡಿದ್ದಾರೆ ಎಂಬ ನೆಲೆಯಲ್ಲಿ ಖ್ಯಾತ ನಟ ಅರವಿಂದ ಬೋಳಾರ್ ಮತ್ತು ಖಾಸಗಿ ಚಾನೆಲ್ ಒಂದರ ಮುಖ್ಯಸ್ಥರ ವಿರುದ್ಧ ನಗರದ ಕಾವೂರ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
ಜ್ಯೋತಿಷ್ಯರನ್ನು ವಿಡಂಬಿಸಿ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಿದ್ದು, ಪುರೋಹಿತರಿಗೆ ಕೀಳು ಮಟ್ಟದಲ್ಲಿ ಅವಹೇಳನ ಹಾಗೂ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕುಂಜತ್ತಬೈಲ್ ನ ಶಿವರಾಜ್ ಎಂಬವರು ದೂರು ನೀಡಿದ್ದು, ಕಾವೂರು ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
- Advertisement -