- Advertisement -
- Advertisement -
ನವದೆಹಲಿ : ಮಾರಕ ಕೊರೊನಾ ವಿರುದ್ಧದ ಹೋರಾಟ ನನ್ನೊಬ್ಬನ ಹೋರಾಟವಲ್ಲ. ಇದು ದೇಶದ ಜನತೆಯ ಹೋರಾಟ. 130 ಕೋಟಿ ಜನತೆ ಒಗ್ಗಟ್ಟು ಪ್ರದರ್ಶಿಸಿ ಕೊರೊನಾ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಮೊದಲು ನಮ್ಮ ದೇಶ ಮುಖ್ಯ. ಅನಂತರ ನಮ್ಮ ಪಕ್ಷ ಮುಖ್ಯ.ಕಾರ್ಯಕರ್ತರು ಭಾರತ ದೇಶ ಎಂದರೆ 130 ಕೋಟಿ ಜನತೆಯ ಮನೆ ಎಂದು ತಿಳಿಯಿರಿ ಎಂದು ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೊರನಾ ವಿರುದ್ಧದ ಹೋರಾಟದಲ್ಲಿ ಪಕ್ಷದ ಕಾರ್ಯಕರ್ತರಿಗೆ 5 ನಿರ್ಧಾರವನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರಧಾನಿ ಕರೆ ನೀಡಿದ 5 ಪ್ರಮುಖ ನಿರ್ಧಾರಗಳು ಈ ರೀತಿ ಇವೆ :
- ಯಾರೂ ಹಸಿವಿನಿಂದ ಬಳಲಬಾರದು. ಬಡವರ ಕಲ್ಯಾಣಕ್ಕಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಬಡವರಿಗೆ ಪಡಿತರ ತೊಂದರೆಯಾಗದಂತೆ ನೋಡಿಕೊಳ್ಳಿ. ಬಡವರು ಹವಿನಿಂದ ನರಳದಂತೆ ನೋಡಿಕೊಳ್ಳಿ ಎಂದು ಕರೆನೀಡಿದರು.
- ಪ್ರತಿಯೊಬ್ಬರು ಮಾಸ್ಕ್ ಧರಿಸಿ ಹೊರಗೆ ಹೋಗಬೇಕು. ಆರೋಗ್ಯಾಧಿಕಾರಿಗಳು ಸೂಚಿಸಿದ ಮಾಸ್ಕ್ ಧರಿಸಬೇಕೆಂದು ಅಲ್ಲ. ಮನೆಯಲ್ಲೇ ತಯಾರಿಸಿದ ಮಾಸ್ಕ್ ಗಳನ್ನು ಧರಿಸಿ ಹೋರಾಡಿ ಎಂದರು.
- ಬ್ಯಾಂಕ್, ವೈದ್ಯಕೀಯ, ಅಂಚೆ, ಪೊಲೀಸ್, ಅಗತ್ಯ ಸೇವೆ ಒದಗಿಸುವವರಿಗೆ ಧನ್ಯವಾದ ತಿಳಿಸಿರಿ.
- ಆರೋಗ್ಯ ಸೇವೆ ಆಯಪ್ ಬಳಸಿ. ತಮ್ಮ ತಮ್ಮ ಮೊಬೈಲ್ ಗಳಲ್ಲಿ ಆಯಪ್ ಅಳವಡಿಸಿಕೊಳ್ಳಿ.
- ಪ್ರಧಾನಿ ಕೇರ್ ಫಂಡ್ ಗೆ ಉದಾರವಾಗಿ ದೇಣಿಗೆ ನೀಡಿ. ಪ್ರತಿಯೊಬ್ಬ ಕಾರ್ಯಕರ್ತರು 40 ಮಂದಿಯಿಂದ ಅನುದಾನ ಹಾಕಿಸುವಂತೆ ಪ್ರಧಾನಿ ಮನವಿ ಮಾಡಿದರು.
- Advertisement -