Wednesday, June 24, 2026
HomeWorldಪ್ರಧಾನಿ ಮೋದಿಯಿಂದ ಇಟಲಿ ಪ್ರಧಾನಿ ಮೆಲೋನಿಗೆ 'ಮೆಲೋಡಿ' ಚಾಕಲೇಟ್‌ ಗಿಫ್ಟ್..!!

ಪ್ರಧಾನಿ ಮೋದಿಯಿಂದ ಇಟಲಿ ಪ್ರಧಾನಿ ಮೆಲೋನಿಗೆ ‘ಮೆಲೋಡಿ’ ಚಾಕಲೇಟ್‌ ಗಿಫ್ಟ್..!!

- Advertisement -
- Advertisement -

ರೋಮ್‌ನಲ್ಲಿ ನಡೆದ ಭಾರತ ಮತ್ತು ಇಟಲಿ ನಡುವಿನ ರಾಜತಾಂತ್ರಿಕ ಭೇಟಿಯ ವೇಳೆ ಒಂದು ರೋಚಕ ಹಾಗೂ ಲಘು ಧಾಟಿಯ ಕ್ಷಣ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.

ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಜನಪ್ರಿಯ ‘ಮೆಲೋಡಿ’ ಚಾಕೊಲೇಟ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಅಪರೂಪದ ಕ್ಷಣದ ಪುಟ್ಟ ವಿಡಿಯೋ ಕ್ಲಿಪ್ ಅನ್ನು ಪ್ರಧಾನಿ ಮೆಲೋನಿ ಅವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡು, “ಸುಂದರ ಉಡುಗೊರೆಗಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು “ಮೆಲೋಡಿ ಇತ್ನಾ ಚಾಕೊಲೇಟಿ ಕ್ಯೂ ಹೈ?” ಎಂಬ ಹಳೆಯ ಜಾಹೀರಾತಿನ ಸಾಲುಗಳನ್ನು ನೆನೆದು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಉಭಯ ನಾಯಕರ ಹೆಸರನ್ನು ಜೋಡಿಸಿ ಸೃಷ್ಟಿಸಲಾಗಿರುವ ‘#Melodi’ ಎಂಬ ಹ್ಯಾಶ್‌ಟ್ಯಾಗ್ ಜಾಲತಾಣಗಳಲ್ಲಿ ಮತ್ತೊಮ್ಮೆ ಭಾರಿ ಟ್ರೆಂಡ್ ಆಗುತ್ತಿದೆ.

ಐದು ದೇಶಗಳ ಪ್ರವಾಸದ ಅಂತಿಮ ಹಂತವಾಗಿ ಇಟಲಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಔಪಚಾರಿಕ ಮಾತುಕತೆಗೂ ಮುನ್ನ ಇಟಲಿ ಪ್ರಧಾನಿಯೊಂದಿಗೆ ರೋಮ್‌ನ ಐತಿಹಾಸಿಕ ‘ಕೊಲೋಸಿಯಮ್’ ಸ್ಮಾರಕಕ್ಕೂ ಭೇಟಿ ನೀಡಿದ್ದರು

- Advertisement -

Latest News

error: Content is protected !!