Monday, June 29, 2026
Homeತಾಜಾ ಸುದ್ದಿತನಗೆ ಪ್ರತಿದಿನ ಆಹಾರ ನೀಡುತ್ತಿದ್ದ ವೃದ್ಧೆ ಆಸ್ಪತ್ರೆ ಸೇರಿದಾಗ ಪಾರಿವಾಳವೊಂದು ಮಾಡಿದ್ದೇನು ಗೊತ್ತಾ?

ತನಗೆ ಪ್ರತಿದಿನ ಆಹಾರ ನೀಡುತ್ತಿದ್ದ ವೃದ್ಧೆ ಆಸ್ಪತ್ರೆ ಸೇರಿದಾಗ ಪಾರಿವಾಳವೊಂದು ಮಾಡಿದ್ದೇನು ಗೊತ್ತಾ?

- Advertisement -
- Advertisement -

ಪ್ರಾಣಿ, ಪಕ್ಷಿಗಳಿಗೆ ನೀವು ಒಂಚೂರು ಪ್ರೀತಿ ತೋರಿಸಿದ್ರೆ ಸಾಕು ಅವು ನಿಮಗೆ ಅದಕ್ಕಿಂತ ಎರಡು ಪಟ್ಟು ಜಾಸ್ತಿ ಪ್ರೀತಿ ತೋರಿಸ್ತವೆ.ಇದಕ್ಕೆ ಅನೇಕ ಉದಾಹರಣೆಗಳನ್ನು ನೀವು ನೋಡಿರ್ತೀರಾ..

ಈ ಘಟನೆ ಎಲ್ಲಿ ನಡೆದದ್ದು ಅನ್ನೋ ಬಗ್ಗೆ ಮಾಹಿತಿ ಇಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನಾರೋಗ್ಯದಿಂದ ವೃದ್ಧೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಆ ವೃದ್ಧೆಗೆ ತನ್ನವರು ಯಾರು ಇಲ್ಲ. ಅದೇ ಆಸ್ಪತ್ರೆಯ ಪಕ್ಕದಲ್ಲಿರುವ ಉದ್ಯಾನವನದಲ್ಲೇ ಸಮಯ ಕಳೆಯುತ್ತಿದ್ದರು. ಆಕೆ ಆಸ್ಪತ್ರೆಗೆ ದಾಖಲಾಗಿನಿಂದ ಆಕೆಯನ್ನು ನೋಡದಕ್ಕೆ ಯಾರೂ ಬಂದಿಲ್ಲ. ಆದ್ರೆ ಪ್ರತಿದಿನವೂ ಪಾರಿವಾಳವೊಂದು ಆಕೆಯ ಹಾಸಿಗೆ ಬಳಿ ಬಂದು ಕುಳಿತು ಹಾರಿ ಹೋಗುತ್ತದೆ.

ಪಾರಿವಾಳಕ್ಕೆ ಆಕೆಯೊಂದಿಗೆ ಬಾಂಧವ್ಯ ಬೆಳೆಯೋದಕ್ಕೆ ಕಾರಣ ಆಕೆ ಪ್ರತಿದಿನ ನೀಡುತ್ತಿದ್ದ ಆಹಾರ. ಇದೇ ಪ್ರೀತಿಯಿಂದ ಪಾರಿವಾಳ ಪ್ರತಿದಿನ ಬಂದು ತನ್ನವರು ಯಾರೂ ಇಲ್ಲದ ಆಕೆಯ ಆರೋಗ್ಯ ವಿಚಾರಿಸುತ್ತಿದೆ. ಪಾರಿವಾಳ ಅಜ್ಜಿಯ ಮೇಲೆ ಕುಳಿತಿರುವ ಆ ಫೋಟೋವೀಗ ಭಾರೀ ವೈರಲ್ ಆಗಿದೆ. ಮನುಷ್ಯ ಪ್ರಾಣಿ, ಪಕ್ಷಿಗಳಿಗಿಂತ ಕಡೆ ಅನ್ನೋ ಮಾತು ಈ ಫೋಟೋ ನೋಡಿದ ಯಾರಿಗಾದರೂ ಅನ್ನಿಸದೇ ಇರಲಾರದು.

- Advertisement -

Latest News

error: Content is protected !!