Thursday, June 4, 2026
Homeಕರಾವಳಿಪಿಕಪ್ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ; ಸುಟ್ಟು ಕರಕಲಾದ ವಾಹನ

ಪಿಕಪ್ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ; ಸುಟ್ಟು ಕರಕಲಾದ ವಾಹನ

- Advertisement -
- Advertisement -

ಸುಳ್ಯ: ತಾಲೂಕಿನ ನೆಟ್ಟಾರು ಸಮೀಪ ಪಿಕಪ್ ವಾಹನವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ನಡೆದಿದೆ. ಘಟನೆಯಲ್ಲಿ ಪಿಕಪ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಪಿಕಪ್ ವಾಹನವು ಬೆಳ್ಳಾರೆ ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದು, ನೆಟ್ಟಾರು ತಿರುವಿನಲ್ಲಿ ಆಕಸ್ಮಿಕವಾಗಿ ಎದುರು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಕೂಡಲೇ ವಾಹನವನ್ನು ನಿಲ್ಲಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಬೆಂಕಿ ವಿಪರೀತ ಹತ್ತಿಕೊಂಡು ಉರಿಯಿತು.

ಬಳಿಕ ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಹಾಗೂ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.

- Advertisement -

Latest News

error: Content is protected !!