Thursday, June 4, 2026
Homeಕರಾವಳಿಸುಳ್ಯ: ಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿ ಬಾವಿಯ ನೀರಿನಲ್ಲಿ ಪೆಟ್ರೋಲ್ ವಾಸನೆ

ಸುಳ್ಯ: ಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿ ಬಾವಿಯ ನೀರಿನಲ್ಲಿ ಪೆಟ್ರೋಲ್ ವಾಸನೆ

- Advertisement -
- Advertisement -

ಸುಳ್ಯ: ಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿ ಬಾವಿಯೊಂದರ ನೀರಿನಲ್ಲಿ ಪೆಟ್ರೋಲ್ ವಾಸನೆ ಬರುತ್ತಿದೆ. ಬಾವಿಯ ಮೇಲಿನಿಂದ ನೋಡಿದಾಗ ನೀರು ತೈಲದಂತೆ ಕಾಣಿಸುತ್ತಿದೆ ಎನ್ನಲಾಗಿದೆ.ಕಳಂಜ ಗ್ರಾಮದ ಪಂಜಿಗಾರು ದಯಾನಂದ ಗೌಡ ಎಂಬವರ ಬಾವಿಯ ನೀರು ಜು. 8ರಿಂದ ಪೆಟ್ರೋಲ್ ವಾಸನೆ ಬರುತ್ತಿತ್ತು.

ಬಾವಿಯನ್ನು ಪರಿಶೀಲಿಸಿದಾಗ ನೀರಿನಲ್ಲಿ ತೈಲ ಬೆರಕೆಯಾದಂತೆ ಕಂಡು ಬಂದಿತ್ತು.ಈ ಕುರಿತಂತೆ ಗ್ರಾಮ ಪಂಚಾಯತ್‍ಗೆ ದೂರು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷಿಸಿ ನೀರಿನಲ್ಲಿ ಕ್ಲೋರೈಡ್ ಅಂಶ ಕಡಿಮೆ ಇದ್ದು ಅದು ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!