ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ನ ದೈನಂದಿನ ಆಡಳಿತ ಕಾರ್ಯಗಳಿಗೆ ಅನುಕೂಲವಾಗುವ ಕಂಪ್ಯೂಟರ್ ಕೊಠಡಿ ಯು ಮಳೆಗಾಲ ದಲ್ಲಿ ನೀರು ಸುರಿದು ತೊಂದರೆಯಾಗುತ್ತಿದ್ದು, ಮತ್ತು ಫೈಲ್ ಗಳು ಮಳೆಗೆ ಒದ್ದೆಯಾಗುವ ಸಾಧ್ಯತೆಯನ್ನು ಅರಿತು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಬಹುಮತ ದ ನಿರ್ಣಯ ದ ಮೇರೆಗೆ ಗ್ರಾಮ ಪಂಚಾಯತ್ ಕಟ್ಟಡ ದ ನವೀಕರಣ ಕಾರ್ಯ ಆರಂಭವಾಗಿತ್ತು.

ಆದರೆ ಆರಂಭವಾಗಿ ಕೆಲ ದಿನಗಳ ಬಳಿಕ ಕಣಿಯೂರು ಗ್ರಾಮದ ಕಾಂಗ್ರೇಸ್ ಕಾರ್ಯಕರ್ತ ಸತೀಶ್ ರಾವ್ ಎಂಬವರು ತಾಲೂಕು ಪಂಚಾಯತ್ ನ ಆಡಳಿತ ಅಧಿಕಾರಿ ಯವರ ಮುಂದೆ ಅರ್ಜಿ ಸಲ್ಲಿಸಿ ಕಣಿಯೂರು ಗ್ರಾಮ ಪಂಚಾಯತ್ ನವೀಕರಣ ಕ್ಕೆ ಕೈಗೊಂಡ ನಿರ್ಣಯ ಕಾನೂನು ಬಾಹಿರವಾಗಿದ್ದು ನಿರ್ಣಯ ವಜಾಗೊಳಿಸಿ ಕಾಮಗಾರಿಯನ್ನು ತಡೆಹಿಡಿಯಬೇಕೆಂದು ಕೋರಿದ್ದರು.

ಎರಡೂ ಕಡೆಯವರ ವಾದವನ್ನು ಆಲಿಸಿದ ಆಡಳಿತಾಧಿಕಾರಿಯವರು ಕಣಿಯೂರು ಗ್ರಾಮ ಪಂಚಾಯತ್ ಕೈಗೊಂಡ ನಿರ್ಣಯ ಕಾನೂನು ಪ್ರಕಾರ ಆಗಿದೆ ಎಂದು ಅಭಿಪ್ರಾಯ ಪಟ್ಟು ಸತೀಶ್ ರಾವ್ ಅವರು ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿರುತ್ತಾರೆ. ಇದರಿಂದಾಗಿ ಆಡಳಿತಾಧಿಕಾರಿಯವರ ಮೌಖಿಕ ಆದೇಶದನ್ವಯ ತಡೆಹಿಡಿಯಲಾಗಿದ್ದ ನವೀಕರಣ ಕಾಮಗಾರಿ ಸಂಪೂರ್ಣಗೊಂಡಿರುತ್ತದೆ.ಹಾಗಾಗಿ ಪಂಚಾಯತ್ ನ ಅಭಿವೃದ್ಧಿ ಗೆ ಅಡ್ಡಲಾಗಿ ತನ್ನ ರಾಜಕೀಯ ದ ಜಿದ್ದಿಗೆ ಬಿದ್ದು ಪ್ರಕರಣ ದಾಖಲು ಮಾಡಿದ್ದ ಕಾಂಗ್ರೇಸ್ ಗೆ ಕಣಿಯೂರು ಗ್ರಾಮ ದಲ್ಲಿ ತೀವ್ರ ಮುಖಭಂಗ ಅನುವಭವಿಸುವಂತಾಗಿದೆ.