- Advertisement -
- Advertisement -
ಪುತ್ತೂರು : ಇಲಾಖೆಯ ನೌಕರರೋರ್ವರಿಗೆ ನಗರಸಭಾ ವ್ಯಾಪ್ತಿಯ ಎಪಿಎಂಸಿ ರಸ್ತೆಯ ಬೀದಿ ಬದಿಯಲ್ಲಿ ಕಸ ಎಸೆದ ಪ್ರಕರಣಕ್ಕೆ ಸಂಬಂಧಿಸಿ ನಗರಸಭೆಯಿಂದ ದಂಡ ವಿಧಿಸಿದ ಘಟನೆ ನಡೆದಿದೆ.
ವ್ಯಕ್ತಿಯೋರ್ವರು ಕಾರಿನಲ್ಲಿ ಬಂದು ಎಪಿಎಂಸಿ ರೈಲ್ವೇ ಬ್ರಿಡ್ಜ್ ಬಳಿಯ ಸೇತುವೆ ಸಮೀಪ ರಸ್ತೆ ಬದಿಯಲ್ಲಿ ಕಸದ ಕಟ್ಟನ್ನು ಬಿಸಾಡಿದ್ದು, ಇದನ್ನು ಗಮನಿಸಿದ ಅದೇ ರಸ್ತೆಯಲ್ಲಿ ಬರುತ್ತಿದ್ದ ನಗರಸಭೆ ಸದಸ್ಯರೋರ್ವರು ಕೂಡಲೇ ಪೊಲೀಸ್ ದೂರು ನೀಡಿದ್ದಾರೆ.ತಕ್ಷಣವೇ ಕಸ ಬಿಸಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಇಲಾಖೆಯ ನೌಕರ ಎಂದು ತಿಳಿದುಬಂದಿದೆ. ಬಳಿಕ ನಗರಸಭೆ ಅಧಿಕಾರಿಗಳು ಠಾಣೆಗೆ ಬಂದು ದಂಡ ವಿಧಿಸಿದ್ದಾರೆ ಎಂದು ತಿಳಿದು ಬಂದಿದೆ .
- Advertisement -