Thursday, June 4, 2026
Homeಕರಾವಳಿಉಡುಪಿ2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಕಾರ್ಯವಾಗುತ್ತದೆ- ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಕಾರ್ಯವಾಗುತ್ತದೆ- ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

- Advertisement -
- Advertisement -

ಮಂಗಳೂರು: 2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಕಾರ್ಯವಾಗುತ್ತದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 2024ರ ಜನವರಿಯಲ್ಲಿ ಪ್ರತಿಷ್ಠಾ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಮಂದಿರದ ಕೆಲಸ ಆರಂಭವಾಗಿದ್ದು, ಕರ್ನಾಟಕದಿಂದ ಕಳುಹಿಸಲಾದ ಶಿಲೆಗಳಿಂದ ಪ್ಲಾಟ್‌ಫಾರಂ ರಚನೆ ಕಾರ್ಯ ನಡೆಯುತ್ತಿದೆ. ಜೂ.1ರಂದು ಗರ್ಭಗುಡಿಯ ಶಿಲಾನ್ಯಾಸ ನಡೆಯಲಿದ್ದು, ನಾವು ಭಾಗವಹಿಸಲಿದ್ದೇವೆ ಎಂದರು.

ವಾರಣಾಸಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ಮಾತನಾಡಿದ ಅವರು ಈ ವಿಚಾರ ಸಂತಸ ತಂದಿದೆ. ಇಲ್ಲಿಯ ತನಕ ಇರುವ ನಂಬಿಕೆ, ಪುರಾಣದಲ್ಲಿ ಇರುವ ಮಾಹಿತಿ ನಿಜವಾಗಿದೆ. ಇದು ಮಾತ್ರವಲ್ಲ; ಇಂತಹದು ಯಾವುದೇ ಇದ್ದರೂ ಬೆಳಕಿಗೆ ಬರಬೇಕಿದೆ. ಭಾರತೀಯ ಸನಾತನ ಸಂಸ್ಕೃತಿಗೆ ವಿಜಯ ದೊರಕಬೇಕಿದೆ ಎಂದು ಅವರು ಎಂದ್ರು.

- Advertisement -

Latest News

error: Content is protected !!