Saturday, May 18, 2024
Homeಅಪರಾಧಬೈಕ್ ಗೆ ಡಿಕ್ಕಿ ಹೊಡೆದ ಹಾರುತ್ತಿದ್ದ ನವಿಲು: ಪತಿ ಸಾವು, ಗರ್ಭಿಣಿ ಪತ್ನಿಗೆ ಗಂಭೀರ ಗಾಯ

ಬೈಕ್ ಗೆ ಡಿಕ್ಕಿ ಹೊಡೆದ ಹಾರುತ್ತಿದ್ದ ನವಿಲು: ಪತಿ ಸಾವು, ಗರ್ಭಿಣಿ ಪತ್ನಿಗೆ ಗಂಭೀರ ಗಾಯ

spot_img
- Advertisement -
- Advertisement -

ಕೇರಳ: ಹಾರುತ್ತಿದ್ದ ನವಿಲೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸಾವನ್ನಪ್ಪಿದ ದಾರುಣ ಘಟನೆ ಕೇರಳದ ತ್ರಿಶೂರ್​​ನ ಅಯ್ಯಂತೋಳೆ ಎಂಬಲ್ಲಿ  ನಡೆದಿದೆ. ಇನ್ನು ಬೈಕ್ ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು 34 ವರ್ಷದ ಪ್ರಮೋಶ್​ ಎಂದು ಗುರುತಿಸಲಾಗಿದೆ. ಪತ್ನಿಯನ್ನು ರೈಲ್ವೆ ನಿಲ್ದಾಣಕ್ಕೆ ಬಿಡಲು ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ. ನವಿಲು ಬಡಿದ ಪರಿಣಾಮ ಪ್ರಮೋಶ್​ ಬೈಕ್​ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ಪರಿಣಾಮವಾಗಿ ಪತಿ – ಪತ್ನಿಯಿಬ್ಬರೂ ರಸ್ತೆಗೆ ಬಿದ್ದಿದ್ದಾರೆ.

ಗಾಯಗೊಂಡಿದ್ದ ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಪ್ರಮೋಶ್​ ಸಾವನ್ನಪ್ಪಿದ್ದಾರೆ. ಪತ್ನಿಯ ಸ್ಥಿತಿ ಗಂಭೀರವಾಗಿದೆ. ಈ ದಂಪತಿ 6 ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎನ್ನಲಾಗಿದೆ.

ಅಂದಹಾಗೆ ಈ ಅಪಘಾತದಲ್ಲಿ ನವಿಲು ಕೂಡ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!