Friday, April 19, 2024
Homeಉದ್ಯಮಪ್ಲೇಸ್ಟೋರ್ ನಿಂದ Paytm App ನ ತೆಗದು ಹಾಕಿದ ಗೂಗಲ್

ಪ್ಲೇಸ್ಟೋರ್ ನಿಂದ Paytm App ನ ತೆಗದು ಹಾಕಿದ ಗೂಗಲ್

spot_img
- Advertisement -
- Advertisement -

ನವದೆಹಲಿ: ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಪೇಟಿಎಂ ಆಯಪ್ ಅನ್ನು ತೆಗೆದು ಹಾಕಿದೆ. ಈ ಬೆಳವಣಿಗೆಯ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯಿಸಲು ಪೇಟಿಎಂ ನಿರಾಕರಿಸಿದ್ದು, ಶೀಘ್ರದಲ್ಲೇ ಹೇಳಿಕೆಯೊಂದನ್ನು ನೀಡಲಾಗುವುದು ಎಂದು ತಿಳಿಸಿದೆ. ಅದಾಗ್ಯೂ ಪೇಟಿಎಂ ಬ್ಯುಸಿನೆಸ್, ಪೇಟಿಎಂ ಮನಿ, ಪೇಟಿಎಂ ಮಾಲ್, ಮತ್ತು ಇತರ ಆಯಪ್ ಗಳು ಪ್ಲೇಸ್ಟೋರ್ ನಲ್ಲಿ ಲಭ್ಯವಿದೆ.

One 97 Communication Ltd. ಪೇಟಿಎಂ ಮಾಲಿಕತ್ವವನ್ನು ಹೊಂದಿತ್ತು. ಇದೀಗ ಈ ಆಯಪ್ ಗೂಗಲ್ ಪ್ಲೇ ಸ್ಟೋರ್ ನಿಂದ ರಿಮೂವ್ ಆಗಿದ್ದು ಆಯಪಲ್ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ ಪೇಟಿಎಂ ” ಪೇಟಿಎಂ ಆಯಂಡ್ರಾಯ್ಡ್ ಆಯಪ್ ತಾತ್ಕಲಿಕವಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಮಾತ್ರವಲ್ಲದೆ ಯಾವುದೇ ಹೊಸ ಪ್ ಡೆಟ್ ಗಳು ಕೂಡ ದೊರಕುವುದಿಲ್ಲ. ಶೀಘ್ರದಲ್ಲಿ ವಾಪಾಸಾಗುತ್ತೇವೆ. ನಿಮ್ಮ ಎಲ್ಲಾ ಪಾವತಿ ಸೇವೆಗಳು ಸಂಪೂರ್ಣ ಭದ್ರವಾಗಿದೆ’ ಎಂದಿದೆ.

- Advertisement -
spot_img

Latest News

error: Content is protected !!