- Advertisement -
![]()
- Advertisement -
ಮಂಗಳೂರು: ರೈಲಿನಲ್ಲಿ ಸೀಟಿಗಾಗಿ ಪ್ರಯಾಣಿಕರ ಮಧ್ಯೆ ಗಲಾಟೆ ನಡೆದು ಓರ್ವ ಪ್ರಯಾಣಿಕ ಚೈನ್ ಎಳೆದು ಟ್ರೈನ್ ನಿಲ್ಲಿಸಿದ್ದಕ್ಕೆ ಆತನಿಗೆ 1500 ರೂಪಾಯಿ ದಂಡ ವಿಧಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಸುಬ್ರಹ್ಮಣ್ಯದಿಂದ ಬೆಳಗ್ಗೆ ಹೊರಟ ಪ್ಯಾಸೆಂಜರ್ ರೈಲಿ ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಬಂಟ್ವಾಳದಲ್ಲಿ ಸೀಟಿನ ವಿಚಾರವಾಗಿ ಇಬ್ಬರು ಪ್ರಯಾಣಿಕರ ನಡುವೆ ಜಗಳ ಉಂಟಾಗಿ, ಪ್ರಯಾಣಿಕ ತುರ್ತು ಚೈನ್ ಎಳೆದಿದ್ದಾನೆ. ತಕ್ಷಣ ರೈಲು ನಿಂತಿದ್ದು, ಅಧಿಕಾರಿಗಳು ಬಂದು ಏನಾಗಿದೆ ಎಂದು ವಿಚಾರಿಸಿದ್ದಾರೆ. ಬಳಿಕ ರೈಲು ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ತಲುಪಿದಾಗ ಚೈನ್ ಎಳೆದ ವ್ಯಕ್ತಿಯನ್ನು ಆರ್‌ಪಿಎಫ್ ಆಧಿಕಾರಿಗಳು ವಿಚಾರಣೆ ನಡೆಸಿ, ದಂಡ ವಿಧಿಸಿ ಎಚ್ಚರಿಸಿದ್ದಾರೆ.
- Advertisement -


