Thursday, April 18, 2024
Homeಕರಾವಳಿಮಂಗಳೂರು: ನಾಳೆ ಮೋದಿ‌  ಕಾರ್ಯಕ್ರಮದಲ್ಲಿ ಭಾಗವಹಿಸುವವರು ಯಾವೆಲ್ಲಾ ವಸ್ತುಗಳನ್ನು ತರುವಂತಿಲ್ಲ?

ಮಂಗಳೂರು: ನಾಳೆ ಮೋದಿ‌  ಕಾರ್ಯಕ್ರಮದಲ್ಲಿ ಭಾಗವಹಿಸುವವರು ಯಾವೆಲ್ಲಾ ವಸ್ತುಗಳನ್ನು ತರುವಂತಿಲ್ಲ?

spot_img
- Advertisement -
- Advertisement -

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು  ಮಂಗಳೂರಿಗೆ ಆಗಮಿಸುತ್ತಿರುವ  ಹಿನ್ನೆಲೆ  ಎಲ್ಲಾ ರೀತಿಯ ಬಂದೋಬಸ್ತ್ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಆಗಮಿಸುವವರು ಒಂದಷ್ಟು ವಸ್ತುಗಳನ್ನು ತರುವಂತಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್‌ ಸೂಚನೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರು‌ ಲೈಟರ್, ಮ್ಯಾಚ್‌ಬಾಕ್ಸ್, ಭಿತ್ತಿಪತ್ರ, ಬಾಟಲಿ, ಕಪ್ಪು ಬಟ್ಟೆ ತರಬಾರದು ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಇನ್ನು ಕಪ್ಪು ಟಿ ಶರ್ಟ್ ಧರಿಸಬಾರದು. ಅದನ್ನು ದುರುಪಯೋಗಪಡಿಸುವ ಸಾಧ್ಯತೆ ಇದೆ ಹಾಗಾಗಿ‌ ಯಾರೂ ಕಪ್ಪು ಟೀ ಶರ್ಟ್‌ ಧರಿಸಿ ಬರಬಾರದು ಎಂದಿದ್ದಾರೆ.

ಹೆಲಿಪ್ಯಾಡ್‌ನಿಂದ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾರ್ವಜನಿಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಅನುಕೂಲವಾಗುವಂತೆ ಕ್ರಮ ವಹಿಸಲಾಗಿದೆ. ತುರ್ತು ಮಾರ್ಗಗಳು ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!